Telegram Join My Telegram WhatsApp Join My WhatsApp

Current Affairs 2026 MCQ (ಪ್ರಚಲಿತ ವಿದ್ಯಮಾನಗಳು)

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಪ್ರಚಲಿತ ವಿದ್ಯಮಾನಗಳು ತುಂಬಾ ಉಪಯುಕ್ತವಾಗಿದೆ. ಯಾರೆಲ್ಲಾ KAS (ಕರ್ನಾಟಕ ಆಡಳಿತ ಸೇವೆ), PSI (ಸಬ್‌ ಇನ್ಸ್ಪಕ್ಟರ್)‌, FDA, SDA, ಬ್ಯಾಂಕಿಗ್‌, ರೈಲ್ವೆ, UPSC, SSC ಪರೀಕ್ಷೆಗೆ ತಯಾರಿ ನಡೆಸುತ್ತಾ ಇದ್ದೀರಾ ಅವರಿಗೆ ಈ Current Affairs 2026 MCQ (ಪ್ರಚಲಿತ ವಿದ್ಯಮಾನಗಳು) ಉಪಯೋಗಕರವಾಗಿದೆ.

Current Affairs 2026 MCQ (ಪ್ರಚಲಿತ ವಿದ್ಯಮಾನಗಳು) ಜನವರಿಯಿಂದ ಜೂನ್‌ವರೆಗಿನ ಬಹು ಆಯೆ ಪ್ರಶ್ನೆಗಳು)Part 2

 

1) ಜೂನ್‌ 2026ರಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (BCCI) ಭಾರತದ ಪುರುಷರ ಟಿ20ಐ (T20I) ತಂಡದ ನೂತನ ನಾಯಕರನ್ನಾಗಿ ಯಾರನ್ನು ನೇಮಕ ಮಾಡಿದೆ?

A) ಕೆ.ಎಲ್ ರಾಹುಲ್‌ (KL Rahul)

B) ಅಕ್ಷರ್‌ ಪಟೇಲ್‌ (Axar Patel)

C) ಶ್ರೇಯಸ್‌ ಅಯ್ಯರ್‌ (Shreyas Iyer)

D) ಹಾರ್ದಿಕ್‌ ಪಾಂಡ್ಯ (Hardik Pandya)

ಸರಿಯಾದ ಉತ್ತರ : C) ಶ್ರೇಯಸ್‌ ಅಯ್ಯರ್

ಪ್ರಮುಖ ಮಾಹಿತಿ 

  • ಜೂನ್‌ 2026ರಲ್ಲಿ ಬಿಸಿಸಿಐ(BCCI) ಮುಂಬರುವ ಇಂಗ್ಲೆಂಡ್‌, ಐರ್ಲೆಂಡ್‌ ಪ್ರವಾಸಗಳು ಹಾಗೂ 2026ರ ಏಷ್ಯನ್‌ ಗೇಮ್ಸ್‌ ಪಂದ್ಯಾವಳಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ T20 ತಂಡಕ್ಕೆ ಹೊಸ ನಾಯಕನ್ನು ಘೋಷಿಸಿತು.
  • T20 ವಿಶ್ವಕಪ್‌ ಮುಗಿದ ಬಳಿಕ ಸೂರ್ಯಕುಮಾರ್‌ ಯಾದವ್‌ ಅವರ ಬದಲಿಗೆ ಸ್ಟೈಲಿಸ್‌ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತದ T20I ತಂಡದ 15ನೇ ನಾಯಕರನ್ನಾಗಿ ನೇಮಿಸಲಾಯಿತು.
  • ಇದೇ ನೂತನ ತಂಡಕ್ಕೆ ಯುವ ಆಟಗಾರ ತಿಲಕ್‌ ವರ್ಮಾ ಅವರನ್ನು ಉಪನಾಯಕರನ್ನಾಗಿ (Vice captain) ಆಯ್ಕೆ ಮಾಡಲಾಗಿದೆ.
  • ಶ್ರೇಯಸ್‌ ಅಯ್ಯರ್‌ ಅವರು ಐಪಿಎಲ್‌ ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌(KKR) ತಂಡವನ್ನು ಮುನ್ನಡೆಸಿ 2024ರಲ್ಲಿ ಚಾಂಪಿಯನ್‌ ಪಟ್ಟ ಗೆಲ್ಲಿಸಿಕೊಟ್ಟ ಅನುಭವ ಹೊಂದಿದ್ದಾರೆ. ಇದೇ ಅತ್ಯುತ್ತಮ ನಾಯಕತ್ವದ ಗುಣಗಳನ್ನು ಪರಿಗಣಿಸಿ BCCI ಅವರಿಗೆ ಈ ಜವಾಬ್ದಾರಿಯನ್ನು ನೀಡಿದೆ.

2) ಕ್ರೀಡಾ ನೀತಿಯಲ್ಲಿ  ಮಹತ್ವದ ಬದಲಾವಣೆ ತರುವ ಮೂಲಕ, 2026ರ ಮೇ ತಿಂಗಳಲ್ಲಿ ಒಲಿಂಪಿಕ್‌ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ ₹8 ಕೋಟಿ ನಗದು ಬಹುಮಾನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ ಭಾರತದ ರಾಜ್ಯ ಸರ್ಕಾರ ಯಾವುದು?

‌A) ಪಂಜಾಬ್ (Punjab)

B) ಹರಿಯಾಣ (Haryana)

C) ಪಶ್ಚಿಮ ಬಂಗಾಳ (West Bengal)

D) ಮಹಾರಾಷ್ಟ್ರ (Maharashtra)

ಸರಿಯಾದ ಉತ್ತರ : C) ಪಶ್ಚಿಮ ಬಂಗಾಳ (West Bengal)

ಪ್ರಮುಖ ಮಾಹಿತಿ

  • ಪಶ್ಚಿಮ ಬಂಗಾಳದ ನೂತನ ಕ್ರೀಡಾ ನೀತಿಯ ಅಡಿಯಲ್ಲಿ, ರಾಜ್ಯದ ಕ್ರೀಡಾ ಸಚಿವರಾದ ನಿಸಿತ್‌ ಪ್ರಮಾಣಿಕ್‌ ಅವರು 2026ರ ಮೇ ತಿಂಗಳಲ್ಲಿ ಈ ಐತಿಹಾಸಿಕ ಘೋಷಣೆ ಮಾಡಿದರು.
  • ಒಲಿಂಪಿಕ್ಸ್‌ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಈ ಹಿಂದೆ ಇದ್ದ ₹25 ಲಕ್ಷದಿಂದ ಬರೋಬ್ಬರಿ ₹8 ಕೋಟಿಗೆ ಹೆಚ್ಚಿಸಲಾಗಿದೆ.
  • ಬೆಳ್ಳಿ ಪದಕ ವಿಜೇತರಿಗೆ ಮೊದಲು ₹15 ಲಕ್ಷ ಇತ್ತು ಆದರೆ ಈಗ ₹6 ಕೋಟಿಗೆ ಹೆಚ್ಚಿಸಿದ್ದಾರೆ.
  • ಕಂಚಿನ ಪದಕ ವಿಜೇತರಿಗೆ ಮೊದಲು ₹10 ಲಕ್ಷ ಇತ್ತು ಆದರೆ ಈಗ ₹4 ಕೋಟಿಗೆ ಹೆಚ್ಚಿಸಿದ್ದಾರೆ.
  • ಕ್ರೀಡಾಪಟುಗಳ ಭವಿಷ್ಯ ಮತ್ತು ಆರ್ಥಿಕ ಭದ್ರತೆಯನ್ನು ಖಚಿತಪಡಿಸಲು ಉನ್ನತ ಮಟ್ಟದ ಸರ್ಕಾರಿ ಉದ್ಯೋಗಾವಾಕಾಶ ಒದಗಿಸಲು ಪ್ರಕ್ರಿಯೆಯನ್ನು ಬಲಪಡಿಸುವುದಾಗಿ ಸರ್ಕಾರ ಪ್ರಕಟಿಸಿದೆ.
  • ಗ್ರಾಮೀಣ ಮತ್ತು ತಳಮಟ್ಟದಲ್ಲಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸುಧಾರಿತ ತರಬೇತಿ ನೀಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವುದು ಮತ್ತು ರಾಜ್ಯದಲ್ಲಿ ಸುಧಾರಿತ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 

3) ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ‘ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ 2026’ (Climate Change Performance Index CCPI 2026) ರಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

A) 18ನೇ (18th)

B) 20ನೇ (20th)

C) 23ನೇ (23rd)

D) 25ನೇ (25th)

ಸರಿಯಾದ ಉತ್ತರ : C) 23ನೇ (23rd)

ಪ್ರಮುಖ ಮಾಹಿತಿ

  • ಜರ್ಮನ್‌ವಾಚ್‌ , ನ್ಯೂಕ್ಲೈಮೇಟ್‌ ಇನ್‌ಸ್ಟಿಟ್ಯೂಟ್‌ ಮತ್ತು ಕ್ಲೈಮೇಟ್‌ ಆಕ್ಷನ್‌ ನೆಟ್‌ವರ್ಕ್‌ ಜಂಟಿಯಾಗಿ ಬಿಡುಗಡೆ ಮಾಡಿದ ಸೂಚ್ಯಂಕದಲ್ಲಿ ಭಾರತವು ಈ ಬಾರಿ 23ನೇ ಸ್ಥಾನಕ್ಕೆ ಕುಸಿದಿದೆ. 2025ರ ಸೂಚ್ಯಂಕದಲ್ಲಿ ಭಾರತವು 10ನೇ ಸ್ಥಾನದಲ್ಲಿತ್ತು, ಅಂದರೆ ಈ ಬಾರಿ ಒಟ್ಟು 13 ಸ್ಥಾನಗಳ ಭಾರಿ ಕುಸಿತ ಕಂಡುಬಂದಿದೆ.
  • ಈ ಕುಸಿತದಿಂದಾಗಿ ಭಾರತವು ‘ಉತ್ತಮ ಕಾರ್ಯಕ್ಷಮತೆʼ ಹೊಂದಿದ ದೇಶಗಳ ಪಟ್ಟಿಯಿಂದ ‘ಮಧ್ಯಮ ಕಾರ್ಯಕ್ಷಮತೆʼ ಹೊಂದಿದ ದೇಶಗಳ ವರ್ಗಕ್ಕೆ ಸೇರಿದೆ. ಭಾರತವು ಗಳಿಸಿದ ಒಟ್ಟು ಅಂಕಗಳು 61.31 ಆಗಿವೆ.
  • ಕುಸಿತಕ್ಕೆ ಪ್ರಮುಖ ಕಾರಣಗಳು ಏನೆಂದರೆ,

1. ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಯಾವುದೇ ನಿರ್ದಿಷ್ಟ ಗಡುವನ್ನು ನಿಗದಿಪಡಿಸದಿರುವುದು.

2. ಹೊಸ ಕಲ್ಲಿದ್ದಲ್ಲು ಗಣಿಗಳ ಹರಾಜು ಪ್ರಕ್ರಿಯೆ ಮುಂದುವರಿದಿರುವುದು.

3. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಇದ್ದರೂ, ಒಟ್ಟಾರೆ ಇಂಧನ ಬಳಕೆಯಲ್ಲಿ ಅದರ ಪಾಲು ಇನ್ನು                              ಕಡಿಮೆಯಿರುವುದು.

  • ಸೂಚ್ಯಂಕವನ್ನು ಅಳೆಯುವ 4 ಪ್ರಮುಖ ಮಾನದಂಡಗಳು (4 Pillars)

ಒಂದು ದೇಶ ಹವಾಮಾನ ಬದಲಾವಣೆ ತಡೆಯಲು ಹೇಗೆ ಕೆಲಸ ಮಾಡುತ್ತಿದೆ ಎಂದು ತಳಿಯಲು ಈ 4 ವಿಷಯಗಳನ್ನು ನೋಡುತ್ತಾರೆ.

1. ಹಸಿರು ಮನೆ ಅನಿಲ ಹೊರಸೂಸುವಿಕೆ : ಪರಿಸರಕ್ಕೆ ಬಿಡುವ ಕಲುಷಿತ ಗಾಳಿಯ ಪ್ರಮಾಣ ಎಷ್ಟು?

2. ನವೀಕರಿಸಬಹುದಾದ ಇಂಧನ : ಸೌರಶಕ್ತಿ, ಗಾಳಿಶಕ್ತಿಯಂತಹ ಪ್ರಕೃತಿ ಸ್ನೇಹಿ ಇಂಧನ ಬಳಕೆ ಎಷ್ಟಿದೆ?

3. ಹವಾಮಾನ ನೀತಿ : ಪರಿಸರ ರಕ್ಷಣೆಗಾಗಿ ಸರ್ಕಾರ ಮಾಡಿರುವ ಕಠಿಣ ನಿಯಮಗಳು ಮತ್ತು ಕಾನೂನುಗಳು ಯಾವುವು?

  • ಜಗತ್ತಿನಲ್ಲಿ ಯಾವುದೇ ಒಂದು ದೇಶವೂ ಕೂಡ ಭೂಮಿಯ ತಾಪಮಾನ ಏರಿಕೆಯನ್ನು ತಡೆಯಲು ಬೇಕಾದ 100% ಪರಿಪೂರ್ಣವಾದ ಕೆಲಸವನ್ನು ಮಾಡಿಲ್ಲ. ಆದ್ದರಿಂದ ಈ ಸೂಚ್ಯಂಕದಲ್ಲಿ ಯಾರಿಗೂ 1,2 ಮತ್ತು 3ನೇ
    Rank ಕೊಟ್ಟಿಲ್ಲ (ಅರ್ಹತೆ ಇಲ್ಲದ ಕಾರಣ ಖಾಲಿ ಬಿಡಲಾಗಿದೆ)
  • ಅತ್ಯುತ್ತಮ ಕೆಲಸ ಮಾಡಿರುವ ದೇಶಗಳ ಪಟ್ಟಿಯಲ್ಲಿ ಡೆನ್ಮಾರ್ಕ್‌ (Denmark) ಮೊದಲ ಸ್ಥಾನದಲ್ಲಿದೆ.
  • ಆದರೆ, ಮೊದಲ ಮೂರು ಸ್ಥಾನಗಳು ಖಾಲಿ ಇರುವುದರಿಂದ ತಾಂತ್ರಿಕವಾಗಿ ಡೆನ್ಮಾರ್ಕ್‌ನ Rank 4ನೇ ಸ್ಥಾನ ಆಗಿರುತ್ತದೆ.

 

4) ಜೂನ್‌ 15 ರಿಂದ 17, 2026 ರವರೆಗೆ ನಡೆದ ಪ್ರಮುಖ ಜಾಗತಿಕ ರಾಜತಾಂತ್ರಿಕ ಸಭೆಯಾದ 52ನೇ ಜಿ7(G7) ಶೃಂಗಸಭೆಯು ಎಲ್ಲಿ ನಡೆಯಿತು?

A) ಪ್ಯಾರಿಸ್‌, ಫ್ರಾನ್ಸ್‌‌ (Paris, France)

B) ಕಾನನಾಸ್ಕಿಸ್‌, ಕೆನಡಾ (Kananaskis, Canada)

C) ಜಿನೀವಾ, ಸ್ವಿಟ್ಜರ್ಲೆಂಡ್‌ (Geneva, Switzerland)

D) ಇವಿಯನ್-ಲೆಸ್-ಬೈನ್ಸ್‌, ಫ್ರಾನ್ಸ್ (Evian-les-Bains, France)

ಸರಿಯಾದ ಉತ್ತರ : D) ಇವಿಯನ್-ಲೆಸ್-ಬೈನ್ಸ್‌ (Evian-les-Bains)

ಪ್ರಮುಖ ಮಾಹಿತಿ

  • 2026ರ ಜಿ7 ಶೃಂಗಸಭೆಯ ‍‍ಅಧ್ಯಕ್ಷತೆಯನ್ನು ಫ್ರಾನ್ಸ್‌ ದೇಶವು ವಹಿಸಿಕೊಂಡಿತ್ತು. ಫ್ರಾನ್ಸ್‌ನ ಆಲ್ಪ್ಸ್‌ ಪರ್ವತಗಳ ತಪ್ಪಲಿನಲ್ಲಿರುವ ಮತ್ತು ಜಿನೀವಾ ಸರೋವರದ ದಡದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ‘ಇವಿಯನ್-ಲೆಸ್-ಬೈನ್ಸ್‌ʼ ನಗರದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
  • ಇವಿಯನ್‌ ನಗರವು ಈ ಹಿಂದೆ 2003ರಲ್ಲಿ ಜೂನ್‌ 1 ರಿಂದ 3 ರವರೆಗೆ 29ನೇ ಜಿ8(G8) ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ಮೂಲಕ ಎರಡು ಬಾರಿ ಇಂತಹ ಜಾಗತಿಕ ಶೃಂಗಸಭೆಗಳನ್ನು ನಡೆಸಿದ ಫ್ರಾನ್ಸ್‌ನ ಮೊದಲ ನಗರ ಎಂಬ ಹೆಗ್ಗಳಿಕೆಗೆ ಇವಿಯನ್‌ ಪಾತ್ರವಾಗಿದೆ.
  • 1997 ರಿಂದ 2014 ರವರೆಗೆ ಈ ಒಕ್ಕೂಟದಲ್ಲಿ ರಷ್ಯಾ ದೇಶವೂ ಸಹ ಸದಸ್ಯನಾಗಿತ್ತು. ಹಾಗಾಗಿ ಆಗ ಇದನ್ನು ಜಿ8(G8) ಎಂದು ಕರೆಯಲಾಗುತ್ತಿತ್ತು. ಆದರೆ 2014ರಲ್ಲಿ ರಷ್ಯಾವು ಕ್ರಿಮಿಯಾವನ್ನು ತನ್ನ ವಶಕ್ಕೆ ಪಡೆದ ಕಾರಣ ಅದನ್ನು ಒಕ್ಕೂಟದಿಂದ ಹೊರಹಾಕಲಾಯಿತು. ಅಂದಿನಿಂದ ಇದು ಮತ್ತೆ ಜಿ7(G7) ಆಯಿತು.
  • ವಿಶೇಷವೆಂದರೆ, 2003ರಲ್ಲಿ ಇವಿಯನ್‌ನಲ್ಲಿ ನಡೆದಿದ್ದ ಆ 29ನೇ ಶೃಂಗಸಭೆಗೆ ಭಾರತದ ಅಂದಿನ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಿಪೇಯಿ ಅವರು ಭಾಗವಹಿಸಿದ್ದರು.
  • ಈ ಸಭೆಯಲ್ಲಿ ಮುಖ್ಯ ಚರ್ಚಾ ವಿಷಯಗಳು ಏನೆಂದರೆ ಉಕ್ರೇನ್‌ ಬಿಕ್ಕಟ್ಟು  ಮಧ್ಯಪ್ರಾಚ್ಯದ ಪರಿಸ್ಥಿತಿ, ಜಾಗತಿಕ ಆರ್ಥಿಕ ಅಸಮತೋಲನಗಳು ಮತ್ತು ಪರಿಸರಕ್ಕೆ ಪೂರಕವಾದ ಪ್ರಮುಖ ಖನಿಜಗಳ ನಿರ್ವಹಣೆ.
  • ಜಿ7(G7) ಎಂದರೇನು? : ಇದ್ ವಿಶ‍್ವದ ಅತ್ಯಂತ ಮುಂದುವರಿದ 7 ಪ್ರಮುಖ ಆರ್ಥಿಕ ರಾಷ್ಟ್ರಗಳ ಒಕ್ಕೂಟವಾಗಿದೆ.
  • ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್ಡಮ್‌ (UK) ಯುನೈಟೆಡ್‌ ಸ್ಟೇಟ್ಸ್‌ (USA) ಇದರೊಂದಿಗೆ ಯುರೋಪಿಯನ್‌ ಯೂನಿಯನ್‌ (EU) ಕೂಡ ಇದರಲ್ಲಿ ಭಾಗವಹಿಸುತ್ತದೆ.
  • ಇದರ ಅಧ್ಯಕ್ಷತೆಯು ಪ್ರತಿ ವರ್ಷ ಸದಸ್ಯ ದೇಶಗಳ ನಡುವೆ ಬದಲಾಗುತ್ತಿರುತ್ತದೆ. 2025 ರಲ್ಲಿ ಈ ಸಭೆಯನ್ನು ಕೆನಡಾ ದೇಶವು ನಡೆಸಿತ್ತು.

 

5) ಜೂನ್‌ 2026ರಲ್ಲಿ, ನ್ಯಾಯಮೂರ್ತಿ ಮೀನಾಕ್ಷಿ ಮದನ್‌ ರೈ ಅವರನ್ನು ಭಾರತದ ಯಾವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು?

A) ಸಿಕ್ಕಿಂ ಹೈಕೋರ್ಟ್‌ (Sikkim High court)

B) ಪಾಟ್ನಾ ಹೈಕೋರ್ಟ್‌ (Patna High court)

C) ಮದ್ರಾಸ್‌ ಹೈಕೋರ್ಟ್‌ (Madras High court)

D) ಬಾಂಬೆ ಹೈಕೋರ್ಟ್‌ (Bombay High court)

ಸರಿಯಾದ ಉತ್ತರ : B) ಪಾಟ್ನಾ ಹೈಕೋರ್ಟ್‌ (Patna High court)

ಪ್ರಮುಖ ಮಾಹಿತಿ

  • ಜೂನ್‌ 2, 2026 ರಂದು ಭಾರತದ ರಾಷ್ಟ್ರಪತಿಯವರು ಸಂವಿಧಾನದ 217(1) ವಿಧಿಯ ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರವನ್ನು ಬಳಸಿ, ನ್ಯಾಯಮೂರ್ತಿ ಮೀನಾಕ್ಷಿ ಮದನ್‌ ರೈ ಅವರನ್ನು ಪಾಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದರು. ಅವರು ಜೂನ್‌ 5, 2026 ರಂದು ಅಧಿಕಾರ ವಹಿಸಿಕೊಂಡರು.
  • ಇವರು ಈ ನೇಮಕಾತಿಗಿಂತ ಮುಂಚೆ ಸಿಕ್ಕಿಂ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಧೀಶರಾಗಿ ಹಾಗೂ ಹಲವು ಬಾರಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
  • ನ್ಯಾಯಮೂರ್ತಿ ಮೀನಾಕ್ಷಿ ಮದನ್‌ ರೈ ಅವರು ಸಿಕ್ಕಿಂ ರಾಜ್ಯದಿಂದ ಹೈಕೋರ್ಟ್‌ ನ್ಯಾಯಧೀಶರಾಗಿ ಉನ್ನತೀಕರಿಸಲ್ಪಟ್ಟ ಮೊದಲ ಮಹಿಳೆಯಾಗಿದ್ದಾರೆ.
  • ಪಾಟ್ನಾ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಗಮ್‌ ಕುಮಾರ್‌ ಸಾಹೂ ಅವರು ಜೂನ್‌ 4, 2026 ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಈ ಖಾಲಿಯಾದ ಹುದ್ದೆಗೆ ಇವರನ್ನು ನೇಮಿಸಲಾಯಿತು.
  • ಭಾರತದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸಿನ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.

 

6) ಡೆನ್ಮಾರ್ಕ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಚೀನಾ ತಂಡವು ಯಾವ ದೇಶವನ್ನು 3-1 ಗೋಲ್‌ಗಳಿಂದ (ಪಂದ್ಯಗಳಿಂದ) ಸೋಲಿಸುವ ಮೂಲಕ 2026ರ ಥಾಮಸ್‌ ಕಪ್‌ (Thomas Cup) ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು?

A) ಜಪಾನ್ (Japan)‌

B) ಫ್ರಾನ್ಸ್‌ (France)

C) ಡೆನ್ಮಾರ್ಕ್‌ (Denmark)

D) ಇಂಡೋನೇಷ್ಯಾ (Indonesia)

ಸರಿಯಾದ ಉತ್ತರ :  B) ಫ್ರಾನ್ಸ್‌ (France)

ಪ್ರಮುಖ ಮಾಹಿತಿ 

  • ಮೇ 2026 ರಲ್ಲಿ ಡೆನ್ಮಾರ್ಕ್‌ ಹಾರ್ಸೆನ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಥಾಮಸ್‌ ಕಪ್‌ ಪುರುಷರ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ನಲ್ಲಿ ಚೀನಾ ತಂಡವು ಬಲಿಷ್ಠ ಪೈಪೋಟಿ ನೀಡಿದ ಫ್ರಾನ್ಸ್‌ ತಂಡವನ್ನು 3-1 ಅಂತರದಿಂದ ಸೋಲಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.
  • ಇದು ಚೀನಾ ಪುರುಷರ ತಂಡ ಗೆದ್ದ 12ನೇ ಥಾಮಸ್‌ ಕಪ್‌ ಪ್ರಶಸ್ತಿಯಾಗಿದೆ (2024 ರಲ್ಲೂ ಚೀನಾ ಚಾಂಪಿಯನ್‌ ಆಗಿತ್ತು).
  • ಫ್ರಾನ್ಸ್‌ ತಂಡವು ತನ್ನ ಇತಿಹಾಸಲ್ಲೇ ಇದೇ ಮೊದಲ ಬಾರಿಗೆ ಥಾಮಸ್‌ ಕಪ್‌ ಟೂರ್ನಿಯ ಫೈನಲ್‌ ತಲುಪಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದಾಖಲೆ ಬರೆಯಿತು.
  • ಚೀನಾದ ಪರವಾಗಿ ವಿಶ್ವದ ನಂ.1 ಆಟಗಾರ ಶಿ ಯುಕಿ (Shi Yuqi) ಮತ್ತು ವೆಂಗ್‌ ಹಾಂಗ್‌ಯಾಂಗ್‌ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿದರೆ, ಹೇ ಜಿ ಟಿಂಗ್‌ ರೆನ್‌ ಕ್ಸಿಯಾಂಗ್‌ ಯು ಜೋಡಿಯು ಡಬಲ್ಸ್‌ ಪಂದ್ಯವನ್ನು ಗೆದ್ದು ಚೀನಾಕ್ಕೆ ಟ್ರೋಫಿ ತಂದುಕೊಟ್ಟಿತು.
  • ಇದೇ ವೇಳೆ ನಡೆದ ಮಹಿಳೆಯರ ಉಬರ್‌ ಕಪ್‌ (Uber Cup) ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವು ಚೀನಾವನ್ನು 3-1 ರಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

 

7) ಮೇ 20, 2026 ರಂದು ಪುನರ್‌ರಚನೆಗೊಂಡ ‘ಅರ್ಜಿಗಳ ಮೇಲಿನ ರಾಜ್ಯಸಭಾ ಸಮಿತಿʼಯ (Committee on Petitions) ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A) ಪಿಯೂಷ್‌ ಗೋಯಲ್‌ (Piyush Goyal)

B) ರಾಘವ್‌ ಚಡ್ಡಾ  (Raghav Chadha)

C) ಮಲ್ಲಿಕಾರ್ಜುನ ಖರ್ಗೆ (Mallikarjun Kharge)

D) ಜಗತ್‌ ಪ್ರಕಾಶ್‌ ನಡ್ಡಾ (Jagat Prakash Nadda)

ಸರಿಯಾದ ಉತ್ತರ : B) ರಾಘವ್‌ ಚಡ್ಡಾ (Raghav Chadha)

ಪ್ರಮುಖ ಮಾಹಿತಿ

  • ರಾಜ್ಯಸಭೆಯ ಸಭಾಪತಿಗಳಾದ ಸಿ.ಪಿ. ರಾಧಾಕೃಷ್ಣನ್‌ ಅವರು ಮೇ 20, 2026 ರಿಂದ ಜಾರಿಗೆ ಬರುವಂತೆ ರಾಜ್ಯಸಭೆಯ ‘ಅರ್ಜಿಗಳ ಮೇಲಿನ ಸಮಿತಿʼಯನ್ನು ಪುನರ್‌ರಚಿಸಿದರು. ಈ ಸಮಿತಿಯ ಅಧ್ಯಕ್ಷರನ್ನಾಗಿ ಸಂಸದ ರಾಘವ್‌ ಚಡ್ಡಾ ಅವರನ್ನು ನೇಮಕ ಮಾಡಲಾಗಿದೆ.
  • ಇದು ಸಂಸತ್ತಿನ ಅತ್ಯಂತ ಹಳೆಯ ಸಮಿತಿಗಳಲ್ಲಿ ಒಂದಾಗಿದೆ. ಈ ಸಮಿತಿಯು ಒಟ್ಟು 10 ಸದಸ್ಯರನ್ನು ಒಳಗೊಂಡಿರುತ್ತದೆ. ಸದಸ್ಯರನ್ನು ಮತ್ತು ಅಧ್ಯಕ್ಷರನ್ನು ರಾಜ್ಯಸಭೆಯ ಸಭಾಪತಿಗಳು ನಾಮನಿರ್ದೇಶನ ಮಾಡುತ್ತಾರೆ.
  • ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ದೂರುಗಳು ಅಥವಾ ಅರ್ಜಿಗಳನ್ನು ಪರಿಶೀಲಿಸುವುದು ಈ ಸಮಿತಿಯ ಮುಖ್ಯ ಕೆಲಸ.
  • ನಾಗರಿಕರು ಸಲ್ಲಿಸಿದ ಅರ್ಜಿಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅಗತ್ಯವಿದ್ದರೆ ಸುಧಾರಣಾ ಕ್ರಮಗಳನ್ನು ಸೂಚಿಸಿ ಸದನಕ್ಕೆ ಸಮಿತಿಯು ವರದಿ ಸಲ್ಲಿಸುತ್ತದೆ.
  • ಯಾವುದೇ ಕೇಂದ್ರ ಸಚಿವರು ಈ ಸಮಿತಿಯ ಸದಸ್ಯರಾಗಲು ಸಾಧ್ಯವಿಲ್ಲ.
  • ಒಂದುವೇಳೆ ಸದಸ್ಯರಾದವರು ಸಚಿವರಾಗಿ ನೇಮಕಗೊಂಡರೆ, ಅವರು ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

 

8) ಇತ್ತೀಚೆಗೆ ಮೇ 2026 ರಲ್ಲಿ ತ್ರಿಪುರಾ, ಮಿಜೋರಾಂ, ಗೋವಾ ಮತ್ತು ಹಿಮಾಚಲ ಪ್ರದೇಶಗಳ ಸಾಲಿಗೆ ಸೇರುವ ಮೂಲಕ ಭಾರತದ 5ನೇ ‘ಸಂಪೂರ್ಣ ಸಾಕ್ಷರ ರಾಜ್ಯʼ (Fully Literate State) ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು?

A) ನಾಗಾಲ್ಯಾಂಡ್‌  (Nagaland)

B) ಸಿಕ್ಕಿಂ (Sikkim)

C) ಉತ್ತರಾಖಂಡ್‌ (Uttarakhand)

D) ಅರುಣಾಚಲ ಪ್ರದೇಶ (Arunachal Pradesh)

ಸರಿಯಾದ ಉತ್ತರ : B) ಸಿಕ್ಕಿಂ (Sikkim)

ಪ್ರಮುಖ ಮಾಹಿತಿ

  • ಮೇ 2026 ರ ಹೊತ್ತಿಗೆ ಸಿಕ್ಕಿಂ ರಾಜ್ಯವು ತನ್ನ ಎಲ್ಲಾ ಜಿಲ್ಲೆಗಳಲ್ಲಿ 100% ಸಾಕ್ಷರತೆಯನ್ನು ಸಾಧಿಸುವ ಮೂಲಕ ಭಾರತದ 5ನೇ ಸಂಪೂರ್ಣ ಸಾಕ್ಷರ ರಾಜ್ಯವಾಯಿತು. ಈ ಮೊದಲು ಕೇರಳ, ಮಿಜೋರಾಂ, ತ್ರಿಪುರಾ, ಗೋವಾ ಮತ್ತು ಹಿಮಾಚಲ ಪ್ರದೇಶಗಳು ಈ ಸಾಧನೆ ಮಾಡಿದ್ದವು.
  • ಸಾಕ್ಷರತೆ ಎಂದರೆ ಕೇವಲ ಓದು ಮತ್ತು ಬರಹ ಮಾತ್ರವಲ್ಲ, ಆಧುನಿಕ ಕಾಲದಲ್ಲಿ ಡಿಜಿಟಲ್‌ ಮತ್ತು ಆರ್ಥಿಕ ಸಾಕ್ಷರತೆಯನ್ನೂ ಇದು ಒಳಗೊಂಡಿದೆ.
  • ಕೇರಳವು ಭಾರತದ ಮೊಟ್ಟಮೊದಲ ಸಂಪೂರ್ಣ ಸಾಕ್ಷರ ರಾಜ್ಯವಾಗಿದೆ.
  • ಸಿಕ್ಕಿಂ ಈಗಾಗಲೇ ‘ಸಂಪೂರ್ಣ ಸಾವಯವ ರಾಜ್ಯ’ (Organic State) ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಈಗ ಸಾಕ್ಷರತೆಯಲ್ಲೂ ಈ ಮೈಲಿಗಲ್ಲು ತಲುಪಿದೆ.
  • ಈ ಸಾಧನೆಯ ಹಿಂದಿನ ಮುಖ್ಯ ಕಾರಣಗಳು

1.‘ನವ ಭಾರತ ಸಾಕ್ಷರತಾ ಕಾರ್ಯಕ್ರಮʼದ ಮೂಲಕ ಹಿರಿಯರಿಗೂ ಶಿಕ್ಷಣ ನೀಡಿದ್ದು.

2.ಹಳ್ಳಿಗಳಲ್ಲಿ ಕಂಪ್ಯೂಟರ್‌ ಮತ್ತು ಮೊಬೈಲ್‌ ಬಳಕೆಯ ಬಗ್ಗೆ ವಿಶೇಷ ಜಾಗೃತಿ ಮೂಡಿಸಿದ್ದು.

3.ಶಾಲೆ ಬಿಟ್ಟಿದ್ದ ಮಕ್ಕಳನ್ನು ಪತ್ತಹಚ್ಚಿ, ಮತ್ತೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು.

 

9) ಭಾರತದ ತಂಡವು 2026ರ ಐಸಿಸಿ(ICC) ಪರುಷರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಯಾವ ದೇಶದ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು?

A) ಆಸ್ಟ್ರೇಲಿಯಾ‌ (Australia)

B) ಇಂಗ್ಲೆಂಡ್‌ (England)

C) ಪಾಕಿಸ್ತಾನ (Pakistan)

D) ನ್ಯೂ ಜಿಲ್ಯಾಂಡ್ (New zeland)

ಸರಿಯಾದ ಉತ್ತರ : D) ನ್ಯೂ ಜಿಲ್ಯಾಂಡ್‌ (New zeland)

ಪ್ರಮುಖ ಮಾಹಿತಿ

  • ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್‌ನ ರೋಮಾಂಚಕ ಫೈನಲ್‌ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಭಾರತ ತಂಡವು ನ್ಯೂ ಜಿಲ್ಯಾಂಡ್‌ ತಂಡವನ್ನು 96 ರನ್‌ಗಳ ಬೃಹತ್‌ ಅಂತರದಿಂದ ಸೋಲಿಸಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.
  • ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಸಂಜು ಸ್ಯಾಮ್ಸನ್‌ (89 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ  255/5 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು. ಇದು ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಫೈನಲ್‌ ಪಂದ್ಯವೊಂದರಲ್ಲಿ ದಾಖಲಾದ ಅತಿ ಗರಿಷ್ಠ ಮೊತ್ತವಾಗಿದೆ.
  • ಈ ಬೃಹತ್‌ ಗುರಿಯನ್ನು ಬೆನ್ನಟ್ಟಿದ ನ್ಯೂ ಜಿಲ್ಯಾಂಡ್‌ ತಂಡವನ್ನು ಭಾರತದ ಜಸ್ಪ್ರಿತ್‌ ಬುಮ್ರಾ ಮತ್ತು ಅಕ್ಷರ್‌ ಪಟೇಲ್‌ ತಂಗುದಾಣಕ್ಕೆ ಕಳುಹಿಸುವ ಮೂಲಕ ಕೇವಲ 159 ರನ್‌ಗಳಿಗೆ ಆಲ್‌ ಔಟ್‌ ಮಾಡಿದರು.
  • ಈ ಗೆಲುವಿನೊಂದಿಗೆ ಭಾರತವು ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಸತತವಾಗಿ ಎರಡು ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
  • ಭಾರತಕ್ಕೆ ಇದು ಒಟ್ಟಾರೆ 3ನೇ ಟಿ20 ವಿಶ್ವಕಪ್‌ ಪ್ರಶಸ್ತಿಯಾಗಿದ್ದು (2007,2024,2026) ಅತಿ ಹೆಚ್ಚು ಬಾರಿ ಟಿ20 ವಿಶ್ವಕಪ್‌ ಗೆದ್ದ ಜಗತ್ತಿನ ಏಕೈಕ ತಂಡ ಎಂಬ ದಾಖಲೆಯನ್ನು ಬರೆಯಿತು.
  • 2026ರ ಈ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ದೇಶಗಳು ಒಟ್ಟಿಗೆ ಸೇರಿ ಆಯೋಜಿಸಿದ್ದವು.

 

10) ಜೂನ್‌ 2026 ರಲ್ಲಿ ಕೇಂದ್ರ ಸರ್ಕಾರವು ಯಾರನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಯ ಹೊಸ ಅಧ್ಯಕ್ಷರನ್ನಾಗಿ (Chairperson) ನೇಮಕ ಮಾಡಿದೆ?

A) ಸಂಜಯ್‌ ಕುಮಾರ್‌ (Sanjay Kumar)

B) ವಿನೀತ್‌ ಜೋಷಿ (Vineet Joshi)

C) ಅನುರಾಗ್‌ ತ್ರಿಪಾಥಿ (Anurag Tripathi)

D) ಲಖಂಡೆ ಪ್ರಶಾಂತ್‌ ಸೀತಾರಾಮ್‌ (Lakhande Prashant Sitaram)

ಸರಿಯಾದ ಉತ್ತರ : D) ಲಖಂಡೆ ಪ್ರಶಾಂತ್‌ ಸೀತಾರಾಮ್‌ (Lokhande Prashant Sitaram)

ಪ್ರಮುಖ ಮಾಹಿತಿ

  • ಜೂನ್ 2026 ರಲ್ಲಿ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಹಿರಿಯ ಐಎಎಸ್ (IAS) ಅಧಿಕಾರಿಯಾದ ಲಖಂಡೆ ಪ್ರಶಾಂತ್ ಸೀತಾರಾಮ್ ಅವರನ್ನು ಸಿಬಿಎಸ್ಇ (CBSE) ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
  • ಇವರು 2001ರ ಬ್ಯಾಚ್‌ನ AGMUT ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
  • ಇತ್ತೀಚೆಗೆ CBSE ಯ ‘ಆನ್-ಸ್ಕ್ರೀನ್ ಮಾರ್ಕಿಂಗ್’ (On-Screen Marking – OSM) ಅಂದರೆ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಮತ್ತು ಗೊಂದಲಗಳು ಉಂಟಾಗಿ ವಿವಾದ ಸೃಷ್ಟಿಯಾಗಿತ್ತು. ಈ ಆಡಳಿತಾತ್ಮಕ ಸವಾಲನ್ನು ನಿಭಾಯಿಸಲು ಸರ್ಕಾರವು ಈ ಪ್ರಮುಖ ಹುದ್ದೆಗೆ ಇವರನ್ನು ತಂದಿದೆ. ಇವರು ರಾಹುಲ್ ಸಿಂಗ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
  • ಇದೇ ಅವಧಿಯಲ್ಲಿ ವರುಣ್ ಭಾರದ್ವಾಜ್ ಅವರನ್ನು CBSE ಯ ಹೊಸ ಕಾರ್ಯದರ್ಶಿಯನ್ನಾಗಿ (Secretary) ನೇಮಕ ಮಾಡಲಾಗಿದೆ.
  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಪ್ರಮುಖ ರಾಷ್ಟ್ರೀಯ ಶಾಲಾ ಶಿಕ್ಷಣ ಮಂಡಳಿಯಾಗಿದೆ.

ಇದನ್ನೂ ಓದಿ

June 2026 Current Affairs | ಜೂನ್ 2026ರ ಪ್ರಚಲಿತ ವಿದ್ಯಮಾನಗಳು

 

Karnataka High Court Recruitment 2026 : 106 ಪಿಯೋನ್‌, ವಾಚ್‌ಮ್ಯಾನ್‌ ಮತ್ತು ಸ್ವೀಪರ್‌ ಹುದ್ದೆಗಳು

 

Leave a Comment