Telegram Join My Telegram WhatsApp Join My WhatsApp

Current Affairs 2026 MCQ (ಪ್ರಚಲಿತ ವಿದ್ಯಮಾನಗಳು)

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಕರೆಂಟ್‌ ಅಫೇರ್ಸ್‌ ತುಂಬಾ ಉಪಯುಕ್ತವಾಗಿದೆ. ಯಾರೆಲ್ಲಾ KAS (ಕರ್ನಾಟಕ ಆಡಳಿತ ಸೇವೆ), PSI (ಸಬ್‌ ಇನ್ಸ್ಪೆಕ್ಟರ್)‌, FDA, SDA, ಬ್ಯಾಂಕಿಗ್‌, ರೈಲ್ವೆ, UPSC, SSC ಪರೀಕ್ಷೆಗೆ ತಯಾರಿ ನಡೆಸುತ್ತಾ ಇದ್ದೀರಾ ಅವರಿಗೆ ಈ Current Affairs 2026 MCQ (ಪ್ರಚಲಿತ ವಿದ್ಯಾಮಾನಗಳು) ಉಪಯೋಗಕರವಾಗಿದೆ.

Current Affairs 2026 MCQ (ಪ್ರಚಲಿತ ವಿದ್ಯಮಾನಗಳು) ಜನವರಿಯಿಂದ ಜೂನ್‌ವರೆಗಿನ ಬಹು ಆಯ್ಕೆ ಪ್ರಶ್ನೆಗಳು

 

1) ಜೂನ್‌ 2026 ರಲ್ಲಿ, ಭಾರತದ ಏಕೀಕೃತ ಪಾವತಿ ಇಂಟರ್ಫೇಸ್‌ (UPI) ತಂತ್ರಜ್ಞಾನವನ್ನು ತನ್ನ ದೇಶದಲ್ಲಿ ಜಾರಿಗೆ ತಂದ 9ನೇ ರಾಷ್ಟ್ರ ಯಾವುದು?

In June 2026, which Country became the 9th to adopt India’s Unified Payments Interface (UPI) ?

ಎ) ಥೈಲ್ಯಾಂಡ್  (Thailand)

ಬಿ) ಶ್ರೀಲಂಕಾ  (Sri Lanka)

ಸಿ) ಮಾರಿಷಸ್  (Mauritius)

ಡಿ) ಕಾಂಬೋಡಿಯಾ (Cambodia)

ಉತ್ತರ : ಡಿ) ಕಾಂಬೋಡಿಯಾ (Cambodia)

ಪ್ರಮುಖ ಮಾಹಿತಿ

  • ಜೂನ್‌ 2026ರಲ್ಲಿ ನಡೆದ ಒಪ್ಪಂದದ ಪ್ರಕಾರ, ಕಾಂಬೋಡಿಯಾ ಭಾರತದ UPI ಅನ್ನು ಅಳವಡಿಸಿಕೊಂಡ ವಿಶ್ವದ 9ನೇ ದೇಶವಾಗಿದೆ.
  • ಭಾರತದ ಕಡೆಯಿಂದ NIPL (ಭಾರತದ ರಾಷ್ಟ್ರೀಯ ಪಾವತಿ ನಿಗಮ ಅಥವಾ NPCI ನ ಅಂತರಾಷ್ಟ್ರೀಯ ವಿಭಾಗ) ಮತ್ತು ಕಾಂಬೋಡಿಯಾ ದೇಶದ ಪ್ರಮುಖ ಬ್ಯಾಂಕ್‌ ಆದ ಅಕ್ಲೆಡಾ ಬ್ಯಾಂಕ್‌ (ACLEDA BANK) ಒಟ್ಟಿಗೆ ಸೇರಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
  • ಕಾಂಬೋಡಿಯಾ ದೇಶದಲ್ಲಿ ಈಗಾಗಲೇ ‘KHQR’ ಎಂಬುವ ರಾಷ್ಟ್ರೀಯ QR Code ವ್ಯವಸ್ಥೆಯಿದೆ. ಈಗ ಭಾರತದ UPI ಅನ್ನು ಈ KHQR ನೊಂದಿಗೆ Link ಮಾಡಲಾಗಿದೆ. ಆದ್ದರಿಂದ ಇನ್ನು ಭಾರತೀಯ ಪ್ರವಾಸಿಗರು ಕಾಂಬೋಡಿಯಾಗೆ ಹೋದಾಗ ಅಲ್ಲಿನ ಅಂಗಡಿಗಳಲ್ಲಿ ತಮ್ಮ ಮೊಬೈಲ್‌ ಮೂಲಕ ಸುಲಭವಾಗಿ ಸ್ಕ್ಯಾನ್‌ ಮಾಡಿ ಹಣ ಪಾವತಿಸಬಹುದು.

 

2) ನೀತಿ ಆಯೋಗವು ಮೇ 2026ರಲ್ಲಿ ಬಿಡುಗಡೆ ಮಾಡಿದ ‘ಶಾಲಾ ಶಿಕ್ಷಣ ಗುಣಮಟ್ಟ ವರದಿ 2026’ರ ಪ್ರಕಾರ ಭಾರತದ ಶಾಲಾ ಶಿಕ್ಷಣ ಶ್ರೇಯಾಂಕದಲ್ಲಿ ಈ ಕೆಳಗಿನ ಯಾವ ರಾಜ್ಯವು ಪ್ರಥಮ ಸ್ಥಾನವನ್ನು ಗಳಿಸಿದೆ?

According to the NITI Aayog Education Quality Report 2026, which state secured the top position in school education rankings?

ಎ) ಕೇರಳ  (Kerala)

ಬಿ) ಪಂಜಾಬ್ (Punjab)

ಸಿ)‌ ಕರ್ನಾಟಕ (Karnataka)

ಡಿ) ತಮಿಳುನಾಡು  (Tamil Nadu)

ಸರಿಯಾದ ಉತ್ತರ : ಬಿ) ಪಂಜಾಬ್‌ (Punjab)

ಪ್ರಮುಖ ಮಾಹಿತಿ

  • ದೀರ್ಘಕಾಲದಿಂದ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದ ಕೇರಳವನ್ನು ಹಿಂದಿಕ್ಕಿ ಪಂಜಾಬ್‌ ಈ ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
  • 2016-17 ರಲ್ಲಿ 22ನೇ ಸ್ಥಾನದಲ್ಲಿದ್ದ ಪಂಜಾಬ್‌ ಕೇವಲ 10 ವರ್ಷಗಳಲ್ಲಿ ಈ ಐತಿಹಾಸಿಕ ಸಾಧನೆಯನ್ನು ಮಾಡಿದೆ.
  • ಈ ಯಶಸ್ಸಿಗೆ ಪ್ರಮುಖ ಕಾರಣವೇನೆಂದರೆ ಪಂಜಾಬ್‌ ಸರ್ಕಾರ ಜಾರಿಗೆ ತಂದ ‘ಮಿಷನ್‌ ಸಮರ್ಥ್‌’ (Mission Samarth) ಮತ್ತು ‘ಸ್ಕೂಲ್ಸ್‌ ಆಫ್‌ ಎಮಿನೆನ್ಸ್ʼ (Schools of Eminence) ಯೋಜನೆಗಳು ಹಾಗೂ ಶೇ.80 ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ‘ಸ್ಮಾರ್ಟ್‌ ಕ್ಲಾಸ್‌ರೂಮ್‌ʼ ಮತ್ತು ಡಿಜಿಟಲ್‌ ಮೂಲಸೌಕರ್ಯಗಳನ್ನು ಒದಗಿಸಿರುವುದು.

ಪಂಜಾಬ್‌ ಮತ್ತು ಕೇರಳದ ಕಲಿಕೆಯ ಪ್ರಾವೀಣ್ಯತೆಯ ಹೋಲಿಕೆ ಈ ಕೆಳಗಿದೆ.

ತರಗತಿ ಮತ್ತು ವಿಷಯ   ಪಂಜಾಬ್‌    ಕೇರಳ
3ನೇ ತರಗತಿ ಭಾಷಾ ಕಲಿಕೆ (Language) ಶೇ.82     ಶೇ.75
3ನೇ ತರಗತಿ ಗಣಿತ (Mathematics)     ಶೇ.78       ಶೇ.70
9ನೇ ತರಗತಿ ಗಣಿತ (Mathematics)    ಶೇ.52 ಶೇ.45

 

3) ಜೂನ್‌ 2026 ರಲ್ಲಿ ಭಾರತದ 100 ನೇ ರಾಮಸರ್‌ ತಾಣವೆಂದು ಘೋಷಿಸಲ್ಪಟ್ಟ ‘ಜೈ ಪ್ರಕಾಶ್‌ ನಾರಾಯಣ ಪಕ್ಷಿಧಾಮ’ (ಸುರ್ಹಾ ತಾಲ್)‌ ಉತ್ತರ ಪ್ರದೇಶದ ಯಾವ ಜಿಲ್ಲೆಯಲ್ಲಿದೆ? 

The Jai Prakash Narayan Bird Sanctuary (Surha Tal), designated as India’s 100th Ramsar site in June 2026 is located in which district of Uttar Pradesh?

ಎ) ಬಲ್ಲಿಯಾ (Ballia)

ಬಿ) ಅಲಿಗಢ (Aligarh)

ಸಿ) ವಾರಣಾಸಿ (Varanasi)

ಡಿ) ಅಜಮ್‌ಗಢ (Azamgarh)

ಉತ್ತರ : ಎ) ಬಲ್ಲಿಯಾ (Ballia)

ಪ್ರಮುಖ ಮಾಹಿತಿ

  • ಜೈ ಪ್ರಕಾಶ್‌ ಪಕ್ಷಿಧಾಮವನ್ನು ಸ್ಥಳೀಯವಾಗಿ ‘ಸುರ್ಹಾ ತಾಲ್‌’ ಎಂದು ಕರೆಯಲಾಗುತ್ತದೆ. ಇದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿದೆ.
  • ಜೂನ್‌ 2026 ರಲ್ಲಿ ಈ ಪಕ್ಷಿಧಾಮವನ್ನು ಜಾಗತಿಕ ಪ್ರಾಮುಖ್ಯತೆಯ ಜೌಗು ಪ್ರದೇಶ ಎಂದು ಗುರುತಿಸಿ, ಭಾರತದ 100 ನೇ ರಾಮಸರ್‌ ತಾಣವಾಗಿ ಘೋಷಿಸಲಾಗಿದೆ.
  • ಇದು ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿರುವ ಅತ್ಯಂತ ಪ್ರಮುಖ ನೈಸರ್ಗಿಕ ಸರೋವರವಾಗಿದೆ. ದೇಶಿಯ ಹಾಗೂ ವಿದೇಶಗಳಿಂದ ಬರುವ ಅಪರೂಪದ ವಲಸೆ ಹಕ್ಕಿಗಳಿಗೆ ಇದು ನೆಚ್ಚಿನ ಆಶ್ರಯ ತಾಣವಾಗಿದೆ.

 

4) ಜೂನ್‌ 2026 ರಲ್ಲಿ ಪ್ರಸಿದ್ಧ ‘ನಾರ್ವೆ ಚೆಸ್ʼ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದವರು ಯಾರು?

In June 2026, who scripted history by becoming the first Indian to win the Norway Chess title?

ಎ) ಅರ್ಜುನ್‌ ಎರಿಗೈಸಿ (Arjun Erigaisi)

ಬಿ) ಗುಕೇಶ್‌ ದೊಮ್ಮರಾಜು (Gukesh Dommaraju)

ಸಿ)‌ ಆರ್.‌ ಪ್ರಜ್ಞಾನಂದ (R. Praggnanandhaa)

ಡಿ) ವಿಶ್ವನಾಥನ್‌ ಆನಂದ್ (Viswanathan Anand)

ಸರಿಯಾದ ಉತ್ತರ : ಸಿ) ಆರ್.‌ ಪ್ರಜ್ಞಾನಂದ (R. Praggnanandha) 

ಪ್ರಮುಖ ಮಾಹಿತಿ 

  • ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್.‌ ಪ್ರಜ್ಞಾನಂದ ಅವರು ಜೂನ್‌ 2026 ರಲ್ಲಿ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್‌ ಸೂಪರ್‌ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದರು.
  • ಇವರು ವಿಶ್ವದ ನಂಬರ್‌ ಒನ್‌ ಚೆಸ್‌ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿ ಜಗತ್ತಿನ ಗಮನ ಸಳೆದರು.
  • ನಂತರ ಕೊನೆಯ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್‌ ಕೇಮರ್‌ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಒಟ್ಟು 18 ಅಂಕಗಳೊಂದಿಗೆ ಪ್ರಜ್ಞಾನಂದ ಅವರು ಅಗ್ರಸ್ಥಾನ ಪಡೆದರು. ಅಮೇರಿಕದ ವೆಸ್ಲಿ ಸೋ ಎರಡನೇ ಸ್ಥಾನ ಪಡೆದರು.

 

5) 2025-26 ರ ಆರ್ಥಿಕ ಸಮೀಕ್ಷೆಯ ಪ್ರಕಾರ ನಮ್ಮ ಭಾರತದಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ ಯಾವುದು?

Which state is the largest producer of rice in India according to the Economic Survey 2025-26 statistical Appendix?

ಎ) ಪಂಜಾಬ್‌ (Punjab)

ಬಿ) ಪಶ್ಚಿಮ ಬಂಗಾಳ (West Bengal)

ಸಿ) ಉತ್ತರ ಪ್ರದೇಶ (Uttar Pradesh)

ಡಿ) ಆಂಧ್ರಪ್ರದೇಶ (Andhra Pradesh)

ಸರಿಯಾದ ಉತ್ತರ : ಸಿ) ಉತ್ತರ ಪ್ರದೇಶ (Uttar Pradesh)

ಪ್ರಮುಖ ಮಾಹಿತಿ

  • ಇತ್ತೀಚಿನ 2025-26 ರ ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, ಉತ್ತರ ಪ್ರದೇಶವು ಪಶ್ಚಿಮ ಬಂಗಾಳವನ್ನು ಹಿಂದಿಕ್ಕಿ ಭಾರತದಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯವಾಗಿ ಗುರುತಿಸಲ್ಪಟ್ಟಿದೆ. ಉತ್ತರ ಪ್ರದೇಶದ ಒಟ್ಟು ಅಕ್ಕಿ ಉತ್ಪಾದನೆಯು ಶೇಕಡಾ 13.82 ರಷ್ಟು ಇದೆ.

ಭಾರತದ ಟಾಪ್‌ 3 ಅಕ್ಕಿ ಉತ್ಪಾದಕ ರಾಜ್ಯಗಳು (2025-26)

ಶ್ರೇಯಾಂಕ (Rank)    ರಾಜ್ಯದ ಹೆಸರು ಒಟ್ಟು ಉತ್ಪಾದನೆ  (ಮಿಲಿಯನ್‌ ಟನ್‌ಗಳಲ್ಲಿ)
1    ಉತ್ತರ ಪ್ರದೇಶ   20.76
2 ತೆಲಂಗಾಣ 17.45
3      ಪಶ್ಚಿಮ ಬಂಗಾಳ 16.02

ಇದರ ಮೊದಲು ಪಶ್ಚಿಮ ಬಂಗಾಳವು ದೀರ್ಘಕಾಲದವರೆಗೆ ಮೊದಲ ಸ್ಥಾನದಲ್ಲಿತ್ತು. ಆದರೆ ಉತ್ತರ ಪ್ರದೇಶದ ವಿಶಾಲವಾದ ಫಲವತ್ತಾದ ಗಂಗಾ ನದಿ ಬಯಲು ಪ್ರದೇಶ ಹಾಗೂ ಸುಧಾರಿತ ನೀರಾವರಿ ಸೌಲಭ್ಯಗಳಿಂದಾಗಿ ಅಲ್ಲಿನ ಅಕ್ಕಿ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ.

6) ಜೂನ್‌ 2026 ರಲ್ಲಿ ಭಾರತವನ್ನು ಮೀರಿಸಿ, ಮಾರುಕಟ್ಟೆ ಬಂಡವಾಳೀಕರಣದ ಮೂಲಕ ವಿಶ್ವದ 6 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾದ ದೇಶ ಯಾವುದು?

Which Country became the world’s 6th largest stock market by market capitalization, surpassing India in June 2026?

ಎ) ಜಪಾನ್‌ (Japan)

ಬಿ) ತೈವಾನ್‌ (Taiwan)

ಸಿ) ಕೆನಡಾ (Canada)

ಡಿ) ದಕ್ಷಿಣ ಕೊರಿಯಾ (South Korea)

ಸರಿಯಾದ ಉತ್ತರ : ಡಿ) ದಕ್ಷಿಣ ಕೊರಿಯಾ (South Korea)

ಪ್ರಮುಖ ಮಾಹಿತಿ

  • ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನಕ್ಕೆ ಬೇಡಿಕೆ ಗಗನಕ್ಕೇರಿದೆ. ಇದಕ್ಕೆ ಬೇಕಾಗುವ ಅತ್ಯಾಧುನಿಕ ಮೆಮೊರಿ ಚಿಪ್‌ಗಳನ್ನು (Memory Chips) ತಯಾರಿಸುವಲ್ಲಿ ದಕ್ಷಿಣ ಕೊರಿಯಾ ಮುಂಚೂಣಿಯಲ್ಲಿದೆ.
  • ಮೇ – ಜೂನ್‌ 2026 ರ ಹೊತ್ತಿಗೆ ದಕ್ಷಿಣ ಕೊರಿಯಾದ ಷೇರು ಮಾರುಕಟ್ಟೆ ಮೌಲ್ಯವು ಸುಮಾರು $5 ಟ್ರಿಲಿಯನ್‌ಗೆ ಏರಿಕೆಯಾಯಿತು. ಅದೇ ಸಮಯಲ್ಲಿ ಭಾರತದ ಮಾರುಕಟ್ಟೆ ಮೌಲ್ಯವು ಸ್ವಲ್ಪ ಕುಸಿದು $4.8 ಟ್ರಿಲಿಯನ್‌ಗೆ ತಲುಪಿದ್ದರಿಂದ ದಕ್ಷಿಣ ಕೊರಿಯಾವು ಭಾರತವನ್ನು ಮೀರಿಸಿ 6 ನೇ ಸ್ಥಾನಕ್ಕೇರಿತು.
  • ಇದಕ್ಕೂ ಮೊದಲು ಮೇ 2026 ರಲ್ಲಿ ಮತ್ತೊಂದು ತಂತ್ರಜ್ಞಾನದ ಪ್ರಮುಖ ಕೇಂದ್ರವಾದ ತೈವಾನ್‌ (Taiwan) ದೇಶವು ಕೂಡ ಭಾರತವನ್ನು ಹಿಂದಿಕ್ಕಿ ವಿಶ್ವದ 5 ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿತ್ತು.
  • ಪ್ರಸ್ತುತ ವಿಶ್ವದ ಅತ್ಯಂತ ದೊಡ್ಡ ಷೇರು ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ಅಮೆರಿಕ (USA) ಮೊದಲ ಸ್ಥಾನದಲ್ಲಿದೆ.

 

7) ಇನ್ಸ್ಟಿಟ್ಯೂಟ್‌ ಪಾರ್‌ ಎಕನಾಮಿಕ್ಸ್‌ ಅಂಡ್‌ ಪೀಸ್‌ (IEP) ಇತ್ತೀಚೆಗೆ ಬಿಡುಗಡೆ ಮಾಡಿದ ‘ಜಾಗತಿಕ ಶಾಂತಿ ಸೂಚ್ಯಂಕ 2026’ (Global Peace Index – GPI 2026) ವರದಿಯಲ್ಲಿ ಒಟ್ಟು 163 ದೇಶಗಳ ಪೈಕಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

What is India’s rank in the Global Peace Index (GPI) 2026?

ಎ) 120ನೇ ಸ್ಥಾನ (120th)

ಬಿ) 125ನೇ ಸ್ಥಾನ (125th)

ಸಿ) 127ನೇ ಸ್ಥಾನ (127th)

ಡಿ) 130ನೇ ಸ್ಥಾನ (130th)

ಸರಿಯಾದ ಉತ್ತರ : ಸಿ) 127ನೇ ಸ್ಥಾನ (127th)

ಪ್ರಮುಖ ಮಾಹಿತಿ

  • 2026 ರ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತವು 127 ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಅಂದರೆ 2025 ರಲ್ಲಿ 115ನೇ ಸ್ಥಾನದಲ್ಲಿದ್ದು ಅದಕ್ಕೆ ಹೋಲಿಸಿದರೆ ಬಾರತದ ಶ್ರೇಯಾಂಕದಲ್ಲಿ ಕುಸಿತ ಕಂಡುಬಂದಿದೆ. ಭಾರತದ ಸ್ಥಾನ ಕುಸಿಯಲು ಪ್ರಮುಖ ಕಾರಣಗಳು ಗಡಿ ಭಾಗದ ಉದ್ವಿಗ್ನತೆ, ಆಂತರಿಕ ಭದ್ರತಾ ಸವಾಲುಗಳು ಮತ್ತು ಪ್ರಾದೇಶಿಕ ಅಸ್ಥಿರತೆಗಳು.
  • ಈ ಸೂಚ್ಯಂಕವನ್ನು ಆಸ್ಟ್ರೇಲಿಯಾದ ಸಿಡ್ನಿ ಮೂಲದ ‘ಇನ್ಸ್ಟಿಟ್ಯೂಟ್‌ ಫಾರ್‌ ಎಕನಾಮಿಕ್ಸ್‌ ಅಂಡ್‌ ಪೀಸ್‌ʼ (Institute for Economics and Peace – IEP) ಎಂಬ ಅಂತರರಾಷ್ಟ್ರೀಯ ಚಿಂತಕರ ಚಾವಡಿ (Think Tank) ಪ್ರತಿವರ್ಷ ಸಿದ್ಧಪಡಿಸಿ ಬಿಡುಗಡೆ ಮಾಡುತ್ತದೆ.
  • ವಿಶ್ವದ ಅತ್ಯಂತ ಶಾಂತಿಯುತ ದೇಶವಾಗಿ ಐಸ್ಲ್ಯಾಂಡ್‌ (Iceland) ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
  • ದಕ್ಷಿಣ ಏಷ್ಯಾದಲ್ಲಿ ಭೂತಾನ್‌ ಅತ್ಯಂತ ಶಾಂತಿಯುತ ದೇಶವಾಗಿದ್ದು, ಜಾಗತಿಕವಾಗಿ 16ನೇ ಸ್ಥಾನದಲ್ಲಿದೆ.

ಯಾವದೇ ದೇಶದ ಶಾಂತಿಯ ಮಟ್ಟವನ್ನು ಅಳೆಯಲು 23 ವಿವಿಧ ಮಾನದಂಡಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವು

  • ಸಮಾಜದಲ್ಲಿನ ಸುರಕ್ಷತೆ ಮತ್ತು ಭದ್ರತೆ (Societal Safety and Security)
  • ದೇಶದಲ್ಲಿ ನಡೆಯುತ್ತಿರುವ ಆಂತರಿಕ ಅಥವಾ ಬಾಹ್ಯ ಸಂಘರ್ಷಗಳು (Ongoing Conflict)
  • ಮಿಲಿಟರೀಕರಣದ ಮಟ್ಟ (Degree of Militarisation)

 

8)  ಜೂನ್‌ 2026ರಲ್ಲಿ, ತನ್ನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಜಿ ಯಿಂದ ಪಿಜಿ ವರೆಗೆ ಉಚಿತ ಶಿಕ್ಷಣವನ್ನು ಘೋಷಿಸಿದ ಭಾರತದ ಮೊದಲ ರಾಜ್ಯ ಯಾವುದು?

Which state became the first in India to announce free education from KG to PG in all government educational institutions in June 2026?

ಎ) ಕೇರಳ (Kerala)

ಬಿ) ಒಡಿಶಾ (Odisha)

ಸಿ) ಕರ್ನಾಟಕ (Karnataka)

ಡಿ) ತಮಿಳುನಾಡು (Tamil Nadu)

ಸರಿಯಾದ ಉತ್ತರ : ಬಿ) ಒಡಿಶಾ (Odisha)

ಪ್ರಮುಖ ಮಾಹಿತಿ

  • ಜೂನ್‌ 2026ರಲ್ಲಿ “ಜ್ಞಾನೋದಯ ಶಿಕ್ಷಾರು ಸಮೃದ್ಧಿ” (Gyanodaya Shiksharu Samruddhi) ಎನ್ನುವ ಮಹತ್ವದ ಯೋಜನೆಯನ್ನು ಒಡಿಶಾದ ಮುಖ್ಯಮಂತ್ರಿಯಾದಂತಹ ಮೋಹನ್‌ ಚರಣ್‌ ಮಾಝಿ ಅವರು ಪ್ರಕಟಿಸಿದರು.
  • ಈ ಯೋಜನೆಯ ಅಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಹಿಡಿದು ಸ್ನಾತಕೋತ್ತರ (PG) ಪದವಿವರೆಗಿನ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತಗೊಳಿಸಲಾಗಿದೆ.
  • ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣವನ್ನು ಸಾರ್ವತ್ರಿಕವಾಗಿ ಘೋಷಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಒಡಿಶಾ ಪಾತ್ರವಾಗಿದೆ.
  • ಈ ಯೋಜನೆಯು ಯಾವುದೇ ಜಾತಿ, ಆದಾಯದ ಮಿತಿ ಅಥವಾ ಬಿಪಿಯಲ್‌ ಕಾರ್ಡ್‌ ತಾರತಮ್ಯವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.
  • ಆದರೆ ಇದು ಕೇವಲ ‘ರೆಗ್ಯುಲರ್‌’ (ನಿಯಮಿತ) ಕೋರ್ಸ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಸೆಲ್ಫ್-ಫೈನಾನ್ಸಿಂಗ್‌ (ಸ್ವಯಂ ಧನಸಹಾಯ) ಹಾಗೂ ವೃತ್ತಿಪರ/ತಾಂತ್ರಿಕ ಕೋರ್ಸ್‌ಗಳಿಗೆ (Medical or Engineering) ಅನ್ವಯಿಸುವುದಿಲ್ಲ.
  • ಈ ಯೋಜನೆಯ ಮುಖ್ಯ ಉದೇಶವೇನೆಂದರೆ ಬಡತನದ ಕಾರಣದಿಂದಾಗಿ ವಿದ್ಯಾರ್ಥಿಗಳು ಮಧ್ಯದಲ್ಲೇ ಶಿಕ್ಷಣವನ್ನು ಕೈಬಿಡುವುದನ್ನು ತಡೆಯುವುದು ಮತ್ತು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು.

 

9) ಇತೀಚೆಗೆ ಬಿಡುಗಡೆಯಾದ ಎಸ್‌ಐಪಿಆರ್‌ಐ (SIPRI) ವಾರ್ಷಿಕ ಪುಸ್ತಕ 2026ರ ವರದಿಯ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳ (Nuclear Weapons) ಸಂಗ್ರಹವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?

According to the SIPRI Yearbook 2026, what is India’s rank in the world in terms of nuclear weapons stockpile?

ಎ) 4ನೇ ಸ್ಥಾನ (4th)

ಬಿ) 5ನೇ ಸ್ಥಾನ (5th)

ಸಿ) 6ನೇ ಸ್ಥಾನ (6th)

ಡಿ) 7ನೇ ಸ್ಥಾನ (7th)

ಸರಿಯಾದ ಉತ್ತರ : ಸಿ) 6ನೇ ಸ್ಥಾನ (6th)

ಪ್ರಮುಖ ಮಾಹಿತಿ

  • ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (SIPRI) ಬಿಡುಗಡೆ ಮಾಡಿದ 2026ರ ವಾರ್ಷಿಕ ವರದಿಯ ಪ್ರಕಾರ ಭಾರತದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ 190ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಜಾಗತಿಕವಾಗಿ ಪರಮಾಣು ಸಾಮರ್ಥ್ಯ ಹೊಂದಿರುವ ದೇಶಗಳಲ್ಲಿ ಭಾರತವು 6ನೇ ಸ್ಥಾನವನ್ನು ಪಡೆದುಕೊಂಡಿದೆ.
  • ಇತಿಹಾಸದಲ್ಲೇ ಮೊದಲ ಬಾರಿಗೆ  ಭಾರತವು ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಪಾಕಿಸ್ತಾನವನ್ನು (170 ಶಸ್ತ್ರಾಸ್ತ್ರಗಳು) ಹಿಂದಿಕ್ಕಿದೆ.
  • ವಿಶ್ವದಲ್ಲೇ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶ ರಷ್ಯಾ (5,420).
  • ಮಿಲಿಟರಿ ಅಥವಾ ರಕ್ಷಣಾ ವಲಯಕ್ಕಾಗಿ (Defense Budget Rank) ಅತಿ ಹೆಚ್ಚು ಹಣ ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವು 5ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ.

 

10) ಮೇ 2026ರಲ್ಲಿ ಭಾರತದ ಮೊದಲ ಸಂಪೂರ್ಣ ಕಾಗದ ರಹಿತ (Fully Paperless) ನ್ಯಾಯಾಂಗ ರಾಜ್ಯವೆಂದು ಯಾವ ರಾಜ್ಯವನ್ನು ಅಧಿಕೃತವಾಗಿ ಘೋಷಿಸಲಾಯಿತು?

Which state was  declared as India’s first fully paperless Judiciary state in May 2026?

ಎ) ಗೋವಾ‌ (Goa)

ಬಿ) ಕೇರಳ (Kerala)

ಸಿ) ಸಿಕ್ಕಿಂ (Sikkim)

ಡಿ) ಗುಜರಾತ್ (Gujarat)

ಸರಿಯಾದ ಉತ್ತರ : ಸಿ) ಸಿಕ್ಕಿಂ (Sikkim)

ಪ್ರಮುಖ ಮಾಹಿತಿ

  • ಭಾರತದ ಮುಖ್ಯ ನ್ಯಾಯಮೂರ್ತಿಗಳಾದ (CJI) ಜಸ್ಟಿಸ್‌ ಸೂರ್ಯ ಕಾಂತ್‌ ಅವರು ಮೇ 1 2026 ರಂದು ಗ್ಯಾಂಗ್ಟಾಕ್‌ನಲ್ಲಿ ನಡೆದ ‘ತಂತ್ರಜ್ಞಾನ ಮತ್ತು ನ್ಯಾಯಾಂಗ ಶಿಕ್ಷಣ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸಿಕ್ಕಿಂ ರಾಜ್ಯವನ್ನು ದೇಶದ ಮೊದಲ ಸಂಪೂರ್ಣ ಕಾಗದ ರಹಿತ ನ್ಯಾಯಾಂಗ ರಾಜ್ಯವೆಂದು ಘೋಷಿಸಿದರು.
  • ಇದರ ವಿಶೇಷತೆ ಏನೆಂದರೆ ಇದು ನಡೆದಿರುವುದು ಸಿಕ್ಕಿಂ ರಾಜ್ಯದ 50ನೇ ಸಂಸ್ಥಾಪನಾ ದಿನಾಚರಣೆಯ ದಿನ.
  • ಕೇವಲ ಹೈಕೋರ್ಟ್‌ ಮಾತ್ರವಲ್ಲದೆ, ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಮತ್ತು ಕೆಳಹಂತದ ಅಧೀನ ನ್ಯಾಯಾಲಯಗಳು (Subordinate Courts)  ಒಟ್ಟಿಗೆ ಸಂಪೂರ್ಣವಾಗಿ ಡಿಜಿಟಲ್‌ ಅಂದರೆ ಕಾಗದ ರಹಿತ ಆಗಿವೆ.
  • ಭಾರತದ ಮೊದಲ ಕಾಗದ ರಹಿತ ಹೈಕೋರ್ಟ್‌ (First Paperless High Court) ಕೇರಳದಲ್ಲಿದೆ.‌
  • ಭಾರತದ ಮೊದಲ ಕಾಗದ ರಹಿತ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ ರಾಜ್ಯ (First Paperless Judiciary State) ಸಿಕ್ಕಿಂ.

ಇದನ್ನೂ ಓದಿ

Karnataka High Court Recruitment 2026 : 106 ಪಿಯೋನ್‌, ವಾಚ್‌ಮ್ಯಾನ್‌ ಮತ್ತು ಸ್ವೀಪರ್‌ ಹುದ್ದೆಗಳು

Leave a Comment