Telegram Join My Telegram WhatsApp Join My WhatsApp

ಬೆಳಗಾವಿ DCC ಬ್ಯಾಂಕ್‌ ನೇಮಕಾತಿ 2026 : 104 ಕ್ಲರ್ಕ್‌, ಗನ್‌ಮ್ಯಾನ್‌ ಮತ್ತು ಪಿಯೋನ್‌ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಬೆಳಗಾವಿ DCC ಬ್ಯಾಂಕ್‌ ನೇಮಕಾತಿ 2026 : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ 2026ರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 104 ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌, ಜೂನಿಯರ್‌ ಅಸಿಸ್ಟೆಂಟ್‌, ಗನ್‌ಮ್ಯಾನ್‌, ಡ್ರೈವರ್‌ ಹಾಗೂ ಪಿಯೋನ್‌ ಹುದ್ದೆಗಳು ಲಭ್ಯವಿದ್ದು, ಕರ್ನಾಟಕ ಸರ್ಕಾರದಲ್ಲಿ ಹಾಗೂ ವಿಶೇಷವಾಗಿ ಬೆಳಗಾವಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತರು ಆಗಸ್ಟ್‌ 27, 2026ರ ಒಳಗೆ ಅಥವಾ ಅದಕ್ಕೂ ಮುನ್ನ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಬೆಳಗಾವಿ DCC ಬ್ಯಾಂಕ್‌ ನೇಮಕಾತಿ 2026 : 104 ಕ್ಲರ್ಕ್‌, ಗನ್‌ಮ್ಯಾನ್‌ ಮತ್ತು ಪಿಯೋನ್‌ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ ಹುದ್ದೆಗಳ ವಿವರ

  • ಸಂಸ್ಥೆಯ ಹೆಸರು : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ (ಬೆಳಗಾವಿ ಡಿಸಿಸಿ ಬ್ಯಾಂಕ್)‌
  • ಒಟ್ಟು ಹುದ್ದೆಗಳು : 104
  • ಉದ್ಯೋಗ ಸ್ಥಳ : ಬೆಳಗಾವಿ – ಕರ್ನಾಟಕ
  • ಹುದ್ದೆಗಳ ಹೆಸರು : ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌, ಗನ್‌ಮ್ಯಾನ್‌, ಪಿಯೋನ್‌
  • ಸಂಬಳ : ತಿಂಗಳಿಗೆ ರೂ. 29,600 – 83,700/-

ಬೆಳಗಾವಿ DCC ಬ್ಯಾಂಕ್‌ ಹುದ್ದೆ ಮತ್ತು ಅರ್ಹತೆಯ ವಿವರಗಳು

ಪೋಸ್ಟ್‌ ಹೆಸರು   ಪೋಸ್ಟ್‌ಗಳ ಸಂಖ್ಯೆ  ಅರ್ಹತೆ
ಎರಡನೇ ದರ್ಜೆಯ ಗುಮಾಸ್ತರು (Second Division Clerks)   83 BA, B.Sc,B.com, Grduation (ಬಿಎ, ಬಿ.ಎಸ್ಸಿ,ಬಿಕಾಂ,ಪದವಿ)
ಗನ್‌ಮ್ಯಾನ್‌ 1 10ನೇ (10th)
ಪಿಯೋನ್‌ 20 10ನೇ (10th)

 

ಬೆಳಗಾವಿ DCC ಬ್ಯಾಂಕ್‌ ಸಂಬಳದ ವಿವರಗಳು

ಪೋಸ್ಟ್‌ ಹೆಸರು  ಸಂಬಳ (ತಿಂಗಳಿಗೆ)
ಎರಡನೇ ದರ್ಜೆಯ ಗುಮಾಸ್ತರು ರೂ. 53,150 – 1,15,150/-
ಗನ್‌ಮ್ಯಾನ್‌ ರೂ. 42,650 – 96,650/-
ಪಿಯೋನ್‌ ರೂ. 47,650 – 1,05,650/-

 

ಬೆಳಗಾವಿ DCC ಬ್ಯಾಂಕ್‌ ಉದ್ಯೋಗಕ್ಕೆ ಬೇಕಾದ ವಯಸ್ಸಿನ ಮಿತಿ

ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಮತ್ತು ಗರಿಷ್ಠ 35 ವರ್ಷ ವಯಸ್ಸಿನವರು ಆಗಿರಬೇಕು.

ಬೆಳಗಾವಿ DCC ಬ್ಯಾಂಕ್‌ ನೇಮಕಾತಿಯ ವಯೋಮಿತಿ ಸಡಿಲಿಕೆ ವಿವರಗಳು

  • ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ : 3 ವರ್ಷಗಳ ವಿನಾಯಿತಿ ಇರಲಿದೆ.
  • SC/ST ಅಭ್ಯರ್ಥಿಗಳಿಗೆ : ಗರಿಷ್ಠ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
  • ಮಹಿಳೆಯರು ಹಾಗೂ PWD (ವಿಕಲಚೇತನರು ಅಥವಾ ಅಂಗವಿಕಲರು) ಅಭ್ಯರ್ಥಿಗಳಿಗೆ  : ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

 

ಬೆಳಗಾವಿ DCC ಬ್ಯಾಂಕ್‌ ನೇಮಕಾತಿಯ ಅರ್ಜಿ ಶುಲ್ಕದ ವಿವರಗಳು

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ (2A, 2B, 3A, 3B) ಅಭ್ಯರ್ಥಿಗಳಿಗೆ : ಒಟ್ಟು ರೂ.  1000/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
  • SC/ST, ಮಾಜಿ ಸೇವಾಧಿಕಾರಿಗಳು ಹಾಗೂ ಪಿಡಬ್ಲ್ಯೂಡಿ(PWD) ಅಭ್ಯರ್ಥಿಗಳಿಗೆ : ಒಟ್ಟು ರೂ. 500/-  ಅರ್ಜಿ ಶುಲ್ಕ ಇರಲಿದೆ.
  • ಶುಲ್ಕ ಪಾವತಿ ವಿಧಾನ : ನಿಯಮಾನುಸಾರ ಡಿಮ್ಯಾಂಡ್‌ ಡ್ರಾಫ್ಟ್(‌DD), ಪೋಸ್ಟಲ್‌ ಆರ್ಡರ್‌ ಅಥವಾ ಮನಿ ಆರ್ಡರ್‌ ಮೂಲಕ ಮಾತ್ರ ಪಾವತಿಸಲು ಅವಕಾಶವಿದೆ.

 

ಬೆಳಗಾವಿ DCC ಬ್ಯಾಂಕ್‌ ಹುದ್ದೆಗಳ ಆಯ್ಕೆ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳನ್ನು ಪ್ರಮುಖವಾಗಿ ಎರಡು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೊದಲನೆಯದಾಗ್ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಮತ್ತು ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತವಾದ ಸಂದರ್ಶನಕ್ಕೆ (Interview) ಆಹ್ವಾನಿಸಿ ಅಂತಿಮವಾಗಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಬೆಳಗಾವಿ DCC ಬ್ಯಾಂಕ್‌ ನೇಮಕಾತಿಯ ಲಿಖಿತ ಪರೀಕ್ಷಾ ಮಾದರಿ

ಎಫ್‌ಡಿಎ (FDA) ಮತ್ತು ಎಸ್‌ಡಿಎ (SDA) ಹುದ್ದೆಗಳ ಅಭ್ಯರ್ಥಿಗಳಿಗೆ ಒಟ್ಟು 200 ಅಂಕಗಳಿಗೆ ವಿಷಯವಾರು ಲಿಖಿತ ಪರೀಕ್ಷೆ ನಡೆಯಲಿದ್ದು, ವಿವರಗಳು ಕೆಳಗಿನಂತಿವೆ:

  1. ಸಾಮಾನ್ಯ ಜ್ಞಾನ : 50 ಅಂಕಗಳು
  2. ಸಾಮಾನ್ಯ ಇಂಗ್ಲೀಷ್‌ : 25 ಅಂಕಗಳು
  3. ಸಾಮಾನ್ಯ ಜ್ಞಾನ : 25 ಅಂಕಗಳು
  4. ಸಹಕಾರ ವಿಷಯಗಳು : 50 ಅಂಕಗಳು
  5. ಭಾರತದ ಸಂವಿಧಾನ : 25 ಅಂಕಗಳು
  6. ಬ್ಯಾಂಕಿಂಗ್‌, ಸಮಾಜಯುಕ್ತವಾದ ಚಟುವಟಿಗೆ ಮತ್ತು ವಸ್ತುನಿಷ್ಠ ವಿಷಯ : 25 ಅಂಕಗಳು

ಇದಲ್ಲದೆ, ಚಾಲಕ (Driver) ಮತ್ತು ಸಹಾಯಕ (Attendant) ಹುದ್ದೆಗಳ ಅಭ್ಯರ್ಥಿಗಳಿಗೆ ಒಟ್ಟು 100 ಅಂಕಗಳಿಗೆ ಲಿಖಿತ ಪರೀಕ್ಷೆ ಇರಲಿದ್ದು, ವಿಷಯಗಳ ವಿವರ ಹೀಗಿದೆ:

  • ಸಾಮಾನ್ಯ ಕನ್ನಡ : 50 ಅಂಕಗಳು
  • ಸಾಮಾನ್ಯ ಇಂಗ್ಲೀಷ್‌ : 50 ಅಂಕಗಳು

ಇದನ್ನೂ ಓದಿ

Current Affairs 2026 MCQ (ಪ್ರಚಲಿತ ವಿದ್ಯಮಾನಗಳು)

Current Affairs 2026 MCQ (ಪ್ರಚಲಿತ ವಿದ್ಯಮಾನಗಳು)

 

ಬೆಳಗಾವಿ DCC ಬ್ಯಾಂಕ್‌ ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ ಪ್ರಕಟಿಸಿರುವ 2026ರ ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳು ಯಾವುದೇ ತಪ್ಪುಗಳಿಲ್ಲದೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ವಿವರವಾದ ಮಾರ್ಗದರ್ಶನ ಮತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

  1. ಅಧಿಕೃತ ಅಧಿಸೂಚನೆಯ ಪರಿಶೀಲನೆ : ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅಭ್ಯರ್ಥಿಗಳು ಮೊದಲನೆಯದಾಗಿ ಬೆಳಗಾವಿ DCC ಬ್ಯಾಂಕ್‌ ನೇಮಕಾತಿ ಅಧಿಸೂಚನೆ 2026 ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣವಾಗಿ ಮತ್ತು ಗಮನವಿಟ್ಟು ಓದಬೇಕು. ಪ್ರಕಟಿತವಾಗಿರುವ ಸೆಕೆಂಡ್‌ ಡಿವಿಷನ್‌ ಕ್ಲರ್ಕ್‌, ಜೂನಿಯರ್‌ ಅಸಿಸ್ಟೆಂಟ್‌, ಡ್ರೈವರ್‌ ಹಾಗೂ ಪಿಯೋನ್‌ ಹುದ್ದೆಗಳಿಗೆ ನಿಗದಿಪಡಿಸಲಾದ ವಯೋಮಿತಿ, ವಿದ್ಯಾರ್ಹತೆ ಮತ್ತು ಇತರ ಅಗತ್ಯ ಅರ್ಹತಾ ಮಾನದಂಡಗಳನ್ನು ಅಭ್ಯರ್ಥಿಯು ಸಂಪೂರ್ಣವಾಗಿ ಪೂರೈಸುತ್ತಾರೆಯೇ ಎಂಬುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು. (ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಲಿಂಕ್‌ ಅನ್ನು ಈ ಕೆಳಗೆ ಒದಗಿಸಲಾಗಿದೆ.)
  2. ಅಗತ್ಯ ದಾಖತೆಗಳ ಸಿದ್ಧತೆ : ಆನ್‌ಲೈನ್‌ ಮೂಲಕ ಅರ್ಜಿಯನ್ನು ಭರ್ತಿ ಮಾಡಲು ಆರಂಭಿಸುವ ಮೊದಲೇ, ಮುಂದಿನ ಎಲ್ಲಾ ಸಂವಹನ ಉದ್ದೇಶಗಳಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಸರಿಯಾದ ಇಮೇಲ್‌ ಐಡಿ (Email ID) ಹಾಗೂ ಮೊಬೈಲ್‌ ಸಂಖ್ಯೆಯನ್ನು ಹೊಂದಿರಬೇಕು. ಇದರೊಂದಿಗೆ ಅರ್ಜಿಯಲ್ಲಿ ವಿವರಗಳನ್ನು ನಮೂದಿಸಲು ಅನಕೂಲವಾಗುವಂತೆ ಹಾಗೂ ಅಪ್‌ಲೋಡ್‌ ಮಾಡಲು ಅಗತ್ಯವಿರುವ ಗುರುತಿನ ಚೀಟಿ (ID Proof), ವಯಸ್ಸಿನ ಪುರಾವೆ, ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿಗಳು, ಇತ್ತೀಚಿನ ಅಪ್ಡೇಟ್‌ ಆದ ರೆಸ್ಯೂಮ್(‌Resume) ಮತ್ತು ಹುದ್ದೆಗೆ ಸಂಬಂಧಿಸಿದ ಯಾವುದೇ ಪೂರ್ವ ಅನುಭವವಿದ್ದರೆ ಅದಕ್ಕೆ ಸಂಬಂಧಿಸಿದ ಅನುಭವದ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಬೇಕು.
  3. ಆನ್‌ಲೈನ್‌ ಲಿಂಕ್‌ ಪ್ರವೇಶ : ಬೆಳಗಾವಿ DCC ಬ್ಯಾಂಕ್‌ ಜೂನಿಯರ್‌ ಅಸಿಸ್ಟೆಂಟ್‌, ಡ್ರೈವರ್‌, ಕ್ಲರ್ಕ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಪ್ಲೈ ಆನ್‌ಲೈನ್‌ (Apply Online) ಪ್ರಕ್ರಿಯೆಗಾಗಿ ಕೆಳಗೆ ನೀಡಿರುವ ಅಧಿಕೃತ ಅಪ್ಲಿಕೇಶನ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನೇಮಕಾತಿ ಪೋರ್ಟಲ್‌ ಅನ್ನು ಪ್ರವೇಶಿಸಬೇಕು.
  4. ಅರ್ಜಿ ನಮೂನೆ ಭರ್ತಿ ಮತು ದಾಖಲೆಗಳ ಅಪ್‌ಲೋಡ್‌ : ವೆಬ್‌ಸೈಟ್‌ ಓಪನ್‌ ಆದ ನಂತರ, ಬೆಳಗಾವಿ DCC ಬ್ಯಾಂಕ್‌ ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ (Online Application Form) ಕೇಳಲಾಗಿರುವ ನಿಮ್ಮ  ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಹಾಗೂ ಇತರೆ ಅಗತುವಿರುವ ಎಲ್ಲಾ ವಿವರಗಳನ್ನು ನಿಖರವಾಗಿ ನವೀಕರಿಸಬೇಕು. ತದನಂತರ ಕೇಳಲಾದ ನಿಗದಿತ ಗಾತ್ರದಲ್ಲಿ ಅಗತ್ಯ ಪ್ರಮಾಣಪತ್ರಗಳು/ ದಾಖಲೆಗಳ ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ ಮಾತ್ರ) ಸರಿಯಾದ ಜಾಗದಲ್ಲಿ ಸ್ಪಷ್ಟವಾಗಿ ಅಪ್‌ಲೋಡ್‌ ಮಾಡಬೇಕು.
  5. ಅರ್ಜಿ ಶುಲ್ಕ ಪಾವತಿ : ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ನಂತರ, ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ ನಿಮ್ಮ ಮೀಸಲಾತಿ ವರ್ಗದ ಪ್ರಕಾರ (ಸಾಮಾನ್ಯ ಒಬಿಸಿ, SC/ST, PWD ಇತ್ಯಾದಿ) ನಿಗದಿಪಡಿಸಲಾದ ನಿಖರವಾದ ಅರ್ಜಿ ಶುಲ್ಕವನ್ನು ನಿಯಮಾನುಸಾರ ಪಾವತಿಸಬೇಕಾಗುತ್ತದೆ (ಇದು ನಿಯಮಾವಳಿಗಳ ಪ್ರಕಾರ ಅನ್ವಯಿದರೆ ಮಾತ್ರ).
  6. ಅಂತಿಮ ಸಲ್ಲಿಕೆ ಮತ್ತು ಸ್ವೀಕೃತಿ : ಕೊನೆಯದಾಗಿ, ಅರ್ಜಿಯನ್ನು ಭರ್ತಿ ಮಾಡಲಾದ ಎಲ್ಲಾ ಮಾಹಿತಿಗಳು ಸರಿಯಾಗಿವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು, ಬೆಳಗಾವಿ DCC ಬ್ಯಾಂಕ್‌ ನೇಮಕಾತಿ 2026 ರ ಅರ್ಜಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕೊನೆಯಲ್ಲಿ ಕಾಣುವ ‘ಸಲ್ಲಿಸು’ (Submit) ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ಪ್ರಕ್ರಿಯೆ ಮುಗಿದ ನಂತರ ಬಹು ಮುಖ್ಯವಾಗಿ, ನಿಮ್ಮ ಭವಿಷ್ಯದ ಹೆಚ್ಚಿನ ಉಲ್ಲೇಖಕ್ಕಾಗಿ ಅಥವಾ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗಳ ಪರಿಶೀಲನೆಗಾಗಿ ಜನರೇಟ್‌ ಆಗುವ ಅರ್ಜಿ ಸಂಖ್ಯೆ (Application Number) ಅಥವಾ ವಿನಂತಿ ಸಂಖ್ಯೆಯನ್ನು (Request Number) ಸುರಕ್ಷಿತವಾಗಿ ಸೆರೆಹಿಡಿದು (Capture) ಇಟ್ಟುಕೊಳ್ಳಬೇಕು ಅಥವಾ ಪ್ರಿಂಟ್‌ ತೆಗೆದುಕೊಳ್ಳಬೇಕು.

 

ವಿಶೇಷ ಸೂಚನೆ

“ಈ ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಲಿಖಿತ ಪರೀಕ್ಷೆ(Written Exam) ಮತ್ತು ಸಂದರ್ಶನದ (Interview) ಆಧಾರದ ಮೇಲೆ ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ಅಭ್ಯರ್ಥಿಗಳು ಹುದ್ದೆ ಕೊಡಿಸುವುದಾಗಿ ನಂಬಿಸ್ವ ಮಧ್ಯವರ್ತಿಗಳ ಆಮಿಷಗಳಿಗೆ ಅಥವಾ ನಕಲಿ ಭರವಸೆಗಳಿಗೆ ಬಲಿಯಾಗಬಾರದು. ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಪರೀಕ್ಷಾ ಮಾದರಿಯ ಪ್ರಕಾರ ಕಠಿಣ ತಯಾರಿ ನಡೆಸಿ, ನಿಮ್ಮ ಸ್ವಂತ ಸಾಮರ್ಥ್ಯದ ಮೇಲಷ್ಟೇ ಭರವಸೆ ಇಟ್ಟು ಪರೀಕ್ಷೆ ಎದುರಿಸುವುದು ಕಡ್ಡಾಯವಾಗಿದೆ.”

 

ಬೆಳಗಾವಿ DCC ಬ್ಯಾಂಕ್‌ ನೇಮಕಾತಿಯ ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ :  27 ಜುಲೈ 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27 ಆಗಸ್ಟ್‌ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 27 ಆಗಸ್ಟ್‌ 2026

 

ಬೆಳಗಾವಿ DCC ಬ್ಯಾಂಕ್‌ ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಹೊಸ ಅಧಿಕೃತ ಅಧಿಸೂಚನೆಯ ಪಿಡಿಎಫ್‌ : Belagavi-DCC-Bank-Notification

ewಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್‌ : Apply LInk

ಅಧಿಕೃತ ವೆಬ್‌ಸೈಟ್‌ : belagavidccb.bank.in

 

 

Leave a Comment