ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಒಂದು ಸುವರ್ಣ ಅವಕಾಶ ಬಂದಿದೆ. ಕರ್ನಾಟಕ ಹೈಕೋರ್ಟ್ (High Court of Karnataka) ಅಧಿಕೃತವಾಗಿ 2026 ರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಒಟ್ಟು 106 ಪಿಯೋನ್, ವಾಚ್‌ಮ್ಯಾನ್, ಸ್ವೀಪರ್, ಲಿಫ್ಟ್ ಅಟೆಂಡರ್, ಸಹಾಯಕ ಬೈಂಡರ್, ಟೈಲರ್, ಧೋಬಿ ಹುದ್ದೆಗಳನ್ನು ತುಂಬಲು ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಗೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಈ ಉದ್ಯೋಗ ಪ್ರಕಟಣೆಯು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 31 ಜುಲೈ 2026 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. Karnataka High Court Recruitment 2026 : 106 ಪಿಯೋನ್, ವಾಚ್‌ಮ್ಯಾನ್ ಮತ್ತು ಸ್ವೀಪರ್ ಹುದ್ದೆಗಳು ಇಲ್ಲಿ ನಿಮಗೆ ಈ ನೇಮಕಾತಿಗೆ ಸಂಬಂದಿಸಿದ ಸಂಪೂರ್ಣ ವಿವರಗಳು ಅಂದರೆ ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಸಂಬಳ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸಲಾಗುತ್ತದೆ.
Karnataka High Court Recruitment 2026 : 106 ಪಿಯೋನ್, ವಾಚ್‌ಮ್ಯಾನ್ ಮತ್ತು ಸ್ವೀಪರ್ ಹುದ್ದೆಗಳು ಈ ನೇಮಕಾತಿಯ ಪ್ರಮುಖ ಮುಖ್ಯಾಂಶಗಳು
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಈ ನೇಮಕಾತಿಯ ಪ್ರಮುಖ ವಿವರಗಳನ್ನು ತಿಳಿದುಕೊಳ್ಳಿ.
ಹುದ್ದೆಯಿರುವ ಸಂಸ್ಥೆಯ ಹೆಸರು : ಕರ್ನಾಟಕ ಹೈಕೋರ್ಟ್ (High Court of Karnataka)
- ಹುದ್ದೆಗಳ ಹೆಸರು : ಪಿಯೋನ್(Peon), ವಾಚ್‌ಮ್ಯಾನ್(Watchman), ಸ್ವೀಪರ್(Sweeper), ಲಿಫ್ಟ್ ಅಟೆಂಡರ್(Lift Attender), ಸಹಾಯಕ ಬೈಂಡರ್(Assistant binder), ಟೈಲರ್(Tailor), ಧೋಬಿ(Dhobi)
- ಉದ್ಯೋಗದ ಸ್ಥಳ : ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ (Online)
- ಆರಂಭಿಕ ದಿನಾಂಕ : 02 ಜುಲೈ 2026
- ಕೊನೆಯ ದಿನಾಂಕ : 31 ಜುಲೈ 2026
- ಅಧಿಕೃತ ವೆಬ್‌ಸೈಟ್ : karnatakajudiciary.kar.nic.in
ಕರ್ನಾಟಕ ಹೈಕೋರ್ಟ್ ಹುದ್ದೆಗಳ ಸಂಪೂರ್ಣ ವಿವರಗಳು (Vacancy Details)
Karnataka High Court ಒಟ್ಟು 106 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಹಂಚಿಕೆ ಮಾಡಿದೆ. ಯಾವ ಯಾವ ಹುದ್ದೆಗಳಿಗೆ ಎಷ್ಟೆಷ್ಟು ಜನರನ್ನು ನೇಮಕಮಾಡಿಕೊಳ್ಳಲಾಗುತ್ತಿದೆ ಎಂಬುದರ ವಿವರಗಳು ಕೆಳಗಿವೆ.
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಪಿಯೋನ್/ವಾಚ್‌ಮ್ಯಾನ್/ಸ್ವೀಪರ್ | 98 |
| ಲಿಫ್ಟ್ ಅಟೆಂಡರ್ | 5 |
| ಸಹಾಯಕ ಬೈಂಡರ್(Assistant binder) | 1 |
| ಟೈಲರ್ | 1 |
| ಧೋಬಿ | 1 |
| ಒಟ್ಟು ಹುದ್ದೆಗಳು | 106 |
ಕರ್ನಾಟಕ ಹೈಕೋರ್ಟ್ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆಗಳು (Educational Qualification)
ಕರ್ನಾಟಕ ಹೈಕೋರ್ಟ್ ನೇಮಕಾತಿಯ ನಿಯಮಗಳ ಪ್ರಕಾರ ಅರ್ಜಿಯನ್ನು ಸಲ್ಲಿಸಲು ಬಯಸುವ ಉದ್ಯೋಗಾಂಕ್ಷಿಗಳು ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
- ವಿಶೇಷ ಕೌಶಲ್ಯದ ಕೆಲಸಗಳಿಗೆ ಅಂದರೆ ಟೈಲರ್ ಅಥವಾ ಧೋಬಿ ಸಂಬಂಧಿಸಿದ ಕೆಲಸದ ಬಗ್ಗೆ ಜ್ಞಾನ ಇರುವುದು ಅಗತ್ಯ.
ವಯೋಮಿತಿ ವಿವರಗಳು (Age Limit)
- ಕನಿಷ್ಠ ವಯಸ್ಸು : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು.
- ಗರಿಷ್ಠ ವಯಸ್ಸು : 40 ವರ್ಷಗಳು ಮೀರಿರಬಾರದು.
ವಯೋಮಿತಿ ಸಡಿಲಿಕೆ (Age Relaxation)
ಸರ್ಕಾರದ ನಿಯಮಗಳ ಪ್ರಕಾರ ವಿವಿಧ ವರ್ಗದ ಉದ್ಯೋಗಾಂಕ್ಷಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
- SC / ST / ಪ್ರವರ್ಗ-1 (Category-1) ಅಭ್ಯರ್ಥಿಗಳು : 05 ವರ್ಷಗಳ ಸಡಿಲಿಕೆ ಇರಲಿದೆ.
- 2A / 2B / 3A / 3B ಅಭ್ಯರ್ಥಿಗಳು : 03 ವರ್ಷಗಳ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ (Application fee)
ಅಭ್ಯರ್ಥಿಗಳು ತಮ್ಮ ತಮ್ಮ ವರ್ಗಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕದ ವಿವರಗಳು ಈ ಕೆಳಗಿವೆ.
- ಸಾಮಾನ್ಯ (General) / ಪ್ರವರ್ಗ-2A / 2B / 3A / 3B ಅಭ್ಯರ್ಥಿಗಳಿಗೆ ರೂ. 200/-
- SC / ST / ಪ್ರವರ್ಗ-1/ ವಿಕಲಚೇತನ (PwBD) ಅಭ್ಯರ್ಥಿಗಳಿಗೆ ರೂ. 100/-
- ಪಾವಿತಿ ವಿಧಾನ (Payment mode) : ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಸಂಬಳದ ವಿವರಗಳು (Salary Details)
ಕರ್ನಾಟಕ ಹೈಕೋರ್ಟ್ ಹುದ್ದೆಗಳಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ಮಾಸಿಕ ವೇತನವನ್ನು ನೀಡಲಾಗುತ್ತದೆ. ಪ್ರತಿ ಹುದ್ದೆಗಳಿಗೆ ನೀಡಲಾಗುವ ಸಂಬಳಗಳ ವಿವರ ಇಲ್ಲಿದೆ.
| ಪೋಸ್ಟ್ ಹೆಸರು (Post Name) | ಮಾಸಿಕ ಸಂಬಳ (Salary per Month) |
| ಪಿಯೋನ್ / ವಾಚ್‌ಮ್ಯಾನ್ / ಸ್ವೀಪರ್ | ರೂ.19,900 ರಿಂದ ರೂ.63,200/- |
| ಲಿಫ್ಟ್ ಅಟೆಂಡರ್ | ರೂ.21,700 ರಿಂದ ರೂ.69,100/- |
| ಸಹಾಯಕ ಬೈಂಡರ್ | ರೂ.19,900 ರಿಂದ ರೂ.63,200/- |
| ಟೈಲರ್ | ರೂ.21,700 ರಿಂದ ರೂ.69,100/- |
| ಧೋಬಿ | ರೂ.19,900 ರಿಂದ ರೂ.63,200/- |
ಆಯ್ಕೆ ಪ್ರಕ್ರಿಯೆ (Selection Process)
ಕರ್ನಾಟಕ ಹೈಕೋರ್ಟ್‌ನ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಆಯ್ಕೆ ಮಾಡಲಾಗುತ್ತದೆ.
- ಲಿಖಿತ ಪರೀಕ್ಷೆ (Written Examination) : ಅಭ್ಯರ್ಥಿಗಳಲ್ಲಿ ಇರುವ ಸಾಮಾನ್ಯ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಪರೀಕ್ಷಿಸಲು ಈ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಸಂದರ್ಶನ (Interview) : ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಅಂತಿಮವಾಗಿ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಇಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಮತ್ತು ಅವರು ಈ ಹುದ್ದೆಗೆ ಸೂಕ್ತವಾಗಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು (Required Documents)
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಬೇಕು, ಅದರ ವಿವರ ಕೆಳಗಿದೆ.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photograph).
- ಅಭ್ಯರ್ಥಿಯ ಸಹಿ (Signature).
- ವಯಸ್ಸಿನ ಪುರಾವೆ (Age Proof – 10 ನೇ ತರಗತಿ ಅಂಕಪಟ್ಟಿ).
- ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರ (10th/SSLC Marks Card).
- ಜಾತಿ ಪ್ರಮಾಣಪತ್ರ (Caste Certificate – ಅನ್ವಯಿಸಿದರೆ).
- ಆದಾಯ ಪ್ರಮಾಣಪತ್ರ (Income Certificate).
- ಚಾಲ್ತಿಯಲ್ಲಿರುವ ಇಮೇಲ್ ಐಡಿ (Email ID) ಮತ್ತು ಮೊಬೈಲ್ ಸಂಖ್ಯೆ (Mobile Number)
- ಯಾವುದೇ ಉದ್ಯೋಗದ ಅನುಭವವಿದ್ದರೆ ಅದರ ಪ್ರಮಾಣಪತ್ರ (Experience Certificate – ಇದ್ದರೆ ಮಾತ್ರ).
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How to Apply Online?)
ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಯಾವುದೇ ತಪ್ಪುಗಳಿಲ್ಲದೆ ಸುಲಭವಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1 : ಮೊದಲನೆಯದಾಗಿ ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ನೀವು ಅರ್ಹರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ಹಂತ 2 : ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೇರ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3 : ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ವೆಬ್‌ಸೈಟ್‌ನಲ್ಲಿ ನೊಂದಣಿ (Registration) ಮಾಡಿಕೊಳ್ಳಿ.
ಹಂತ 4 : ಈಗ ಲಾಗಿನ್ ಆಗಿ, ಅಲ್ಲಿ ಕೇಳಲಾದ ಎಲ್ಲ ಅಗತ್ಯ ದಾಖಲೆಗಳ ವಿವರಗಳನ್ನು (ಹೆಸರು, ವಿಳಾಸ, ವಿದ್ಯಾರ್ಹತೆ ಇತ್ಯಾದಿ) ಸರಿಯಾಗಿ ಭರ್ತಿ ಮಾಡಿ.
ಹಂತ 5 : ನಿಮ್ಮ ಇತ್ತೀಚಿನ ಫೋಟೋ, ಸಹಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು (ಸ್ಕ್ಯಾನ್ ಮಾಡಿಸಿ ಇಟ್ಟುಕೊಂಡ) ನಿಗದಿಪಡಿಸಿದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
ಹಂತ 6 : ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಬ್ಯಾಕಿಂಗ್ ಅಥವಾ ಕಾರ್ಡ್ ಮೂಲಕ ಪಾವತಿಸಿ.
ಹಂತ 7 : ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ ಸಬ್ಮಿಟ್ (Submit) ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 8 : ಅರ್ಜ ಹಾಕಿ ಆದ ನಂತರ , ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ರಶೀದಿಯನ್ನು ಪ್ರಿಂಟ್ ತೆಗೆದಕೊಳ್ಳಿ ಅಥವಾ ಸೇವ್ ಮಾಡಿ ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು (Important Dates)
- ಅಧಿಸೂಚನೆ ಬಿಡುಗಡೆಯಾದ ತಿಂಗಳು : ಏಪ್ರಿಲ್ 2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 02 ಜುಲೈ 2026
- ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ : 31 ಜುಲೈ 2026
ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
ಕೊನೆಯ ದಿನಾಂಕದವರೆಗೆ ಕಾಯಬೇಡಿ : ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ ಯಾಕೆಂದರೆ ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಬಹುದು.
ಮಾಹಿತಿಯ ನಿಖರತೆ : 10 ನೇ ತರಗತಿ ಅಂಕಪಟ್ಟಿಯಲ್ಲಿ ಇರುವಂತೆ ನಿಮ್ಮ ಹೆಸರು ಮತ್ತು ಜನ್ಮ ದಿನಾಂಕವನ್ನು ಹಾಕಿ. ಮಾಹಿತಿ ತಪ್ಪಾಗಿದ್ದರೆ ಅರ್ಜಿಯನ್ನು ತಿರಸ್ಕರಿಸಬಹುದು.
ಸಂಪರ್ಕ ಮಾಹಿತಿ : ನೀವು ನೀಡುವ ಮೊಬೈಲ್ ಸಂಖ್ಯೆ ಮತು ಇಮೇಲ್ ಐಡಿ ಚಾಲ್ತಿಯಲ್ಲಿರಬೇಕು, ಯಾಕೆಂದರೆ ಪರೀಕ್ಷೆ ಮತ್ತು ಸಂದರ್ಶನದ ಮುಂದಿನ ಎಲ್ಲಾ ಮಾಹಿತಿಗಳನ್ನು ಹೈಕೋರ್ಟ್ ಇದರ ಮೂಲಕವೇ ಕಳುಹಿಸುತ್ತದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ಸಿಗುವ ಈ ಕೆಲಸವು ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಸುರಕ್ಷತೆ ಮತ್ತು ಗೌರವವನ್ನು ಒದಗಿಸುತ್ತದೆ. ಕೇವಲ 10 ನೇ ತರಗತಿ ಪಾಸಾದವರಿಗೆ ಅತ್ಯುತ್ತಮ ವೇತನ ನೀಡುವ ಹುದ್ದೆಯಾಗಿದೆ. ಆದ್ದರಿಂದ ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ ಹಾಗೂ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ.
ಕರ್ನಾಟಕ ಹೈಕೋರ್ಟ್ ಅಧಿಸೂಚನೆಯ ಮುಖ್ಯವಾದ ಲಿಂಕ್‌ಗಳು
ಅಧಿಕೃತ ನೋಟಿಫಿಕೇಶನ್ PDF : Karnataka_High_Court_Recruitment_2026_Apply_Online_for_101_Peon
ಪರಿಷ್ಕೃತ ನೋಟಿಫಿಕೇಶನ್ PDF : Karnataka_High_Court_Recruitment_Revised_notification_for_101_Watchman
ಅರ್ಜಿ ಸಲ್ಲಿಸಲು ಲಿಂಕ್ : https://judiciary.karnataka.gov.in
Karnataka High Court Recruitment 2026 – ಪದೇ ಪದೇ ಕೆಳಲಾಗುವ ಪ್ರಶ್ನೆಗಳು (FAQs)
1)ಕರ್ನಾಟಕ ಹೈಕೋರ್ಟ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಶುಲ್ಕ ಪಾವತಿಸಲು ಮತ್ತು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 2026, ರಾತ್ರಿ 11:59 ರವರೆಗೆ.
2)ಒಟ್ಟು ಎಷ್ಟು ಹುದೆಗಳು ಈ ನೇಮಕಾತಿಯಲ್ಲಿ ಇದೆ?
ಒಟ್ಟು 106 ಹುದ್ದೆಗಳು ಇವೆ.
3)ಕರ್ನಾಟಕ ಹೈಕೋರ್ಟ್ ಹುದ್ದೆಗಳಿಗೆ ಅಗತ್ಯವಿರುವ ಅರ್ಹತೆ ಎನು?
10 ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೂ ಈ ನೇಮಕಾತಿಯಲ್ಲಿ ನೀಡಿರುವ ಹುದ್ದೆಗಳಿಗೆ ಸಂಬಂಧಿಸಿದ ಕೆಲಸದ ಅನುಭವದ ಅಗತ್ಯವಿರುತ್ತದೆ.
4)ಕರ್ನಾಟಕ ಹೈಕೋರ್ಟ್ ನೇಮಕಾತಿಗೆ ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅರ್ಹತೆ ಮತ್ತು ಒಬಿಸಿ ಅಭ್ಯರ್ಥಿಗಳು ರೂ.200/- ಪಾವತಿಸಬೇಕು, ಆದರೆ SC / ST / ಪ್ರವರ್ಗ-1 / PwBD ಅಭ್ಯರ್ಥಿಗಳು ರೂ.100/- ಪಾವತಿಸಬೇಕು.
5)ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ, ನಂತರ ಸಂದರ್ಶನ ನಡೆಸಲಾಗುತ್ತದೆ.
6)ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೇ?
ದಿನಾಂಕ 22.04.2026 ರ ಅಧಿಸೂಚನೆಯ ವಿರುದ್ಧ ಈಗಾಗಲೇ ಅರ್ಜಿ ಸಲ್ಲಿಸಿರು್ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಅಥವಾ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ, ಆದರೆ ಪರಿಷ್ಕೃತ ಅಧಿಸೂಚನೆಯಲ್ಲಿರುವ ಹೆಚ್ಚುವರಿ ಸೂಚನೆಗಳನ್ನು ಪಾಲಿಸಬೇಕು.
ಹಕ್ಕುತ್ಯಾಗ (Disclaimer)
ಈ ಲೇಖನಲ್ಲಿ ನೀಡಲಾಗಿರುವ ಮಾಹಿತಿಯನ್ನು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಟಣೆಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ವಿವರಗಳನ್ನು ಖಚಿತಪಡಿಸಿಕೊಳ್ಳಬೇಕಾಗಿ ವಿನಂತಿ. ಇದರಲ್ಲಿ ಯಾವುದೇ ತಾಂತ್ರಿಕ ಬದಲಾವಣೆಗಳು ಅಥವಾ ತಪ್ಪುಗಳಿಗೆ ನಮ್ಮ ವೆಬ್‌ಸೈಟ್ ಜವಾಬ್ದಾರಿಯಾಗಿರುವುದಿಲ್ಲ. ದಯವಿಟ್ಟು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.