ಈ ವರ್ಷ ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಬರದ ಕಾರಣ ರಾಜ್ಯದ ಜನತೆಗೆ ಅದರಲ್ಲೂ ರೈತರಿಗೆ ತುಂಬಾ ಸಮಸ್ಯೆಯಾಗಿದೆ. ಜೂನ್ ನಲ್ಲಿ ಶೇ.43 ರಷ್ಟು ಮಾತ್ರ ಮುಂಗಾರು ಮಳೆ ಆಗಿದೆ. Karnataka Monsoon Updates : ಜುಲೈ ಮೊದಲ ವಾರದಲ್ಲಿ ಭಾರಿ ಮಳೆಯ ಮುನ್ಸೂಚನೆ ನೋಡುವುದಾದರೆ ಈಗ ಹವಮಾನ ಇಲಾಖೆಯು ರಾಜ್ಯದ ಜನತೆಗೆ ಹಾಗೂ ರೈತರಿಗೆ ಒಂದು ಗುಡ್ ನ್ಯೂಸ್ ಹಾಗೂ ಇನ್ನೊಂದು ಬ್ಯಾಡ್ ನ್ಯೂಸ್ ನೀಡಿದೆ. ಈ ವಾರ ಅಂದರೆ ಜುಲೈ ತಿಂಗಳ ಮೊದಲ ವಾರ ಯಾವ ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್ ಇದೆ, ಯಾವ ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್ ಇಲ್ಲ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Karnataka Monsoon Updates : ಜುಲೈ ಮೊದಲ ವಾರದಲ್ಲಿ ಮಳೆಯ ಮುನ್ಸೂಚನೆ ಏನು? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಮೊದಲನೆಯದಾಗಿ ಯಾವ ಜಿಲ್ಲೆಗಳಿಗೆ ಅಲರ್ಟ್ ಇದೆ ಹಾಗೆ ಯಾವ ಜಿಲ್ಲೆಗಳಿಗೆ ಅಲರ್ಟ್ ಇಲ್ಲ ಇದರ ಕುರಿತಾದ ಮಾಹಿತಿ ಇಲ್ಲಿದೆ. ರಾಜ್ಯದ ಅರ್ಧದಷ್ಟು ಭಾಗದ ಜಿಲ್ಲೆಗಳಿಗೆ ಅಲರ್ಟ್ ಇದೆ. ಇದು ತುಂಬಾ ಸಂತೋಷ ತರುವ ವಿಷಯ ಹಾಗೂ ನಮ್ಮ ಪುಣ್ಯ ಯಾಕೆಂದರೆ ಕಳೆದ ತಿಂಗಳು ಜೂನ್ ನಲ್ಲಿ ಹೇಳಿಕೊಳ್ಳುವಷ್ಟು ಮಳೆ ಆಗಿರಲಿಲ್ಲ.
ಜುಲೈ ಮೊದಲ ವಾರದ ಭಾರಿ ಮಳೆಗೆ ತುತ್ತಾಗಲಿರುವ ಪ್ರಮುಖ ಜಿಲ್ಲೆಗಳು ಯಾವುವು?
ಹವಾಮಾನ ಇಲಾಖೆಯು ಜೂನ್ 30 ನೇ ತಾರೀಖು ಅಂದರೆ ಮೊನ್ನೆ ಒಟ್ಟು 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿತ್ತು. ಜುಲೈಯಲ್ಲಿ ಮೊದಲ ವಾರದ 5 ದಿನ ಯಾವ ರೀತಿಯಾಗಿ ಮಳೆ ಆಗಲಿದೆ ಮತ್ತೆ ಯಾವೆಲ್ಲಾ ಅಲರ್ಟ್ ಇದೆ ಎಂಬ ವಿವರ ಇಲ್ಲಿದೆ.
1.ಉತ್ತಮ ಮಳೆಯಾಗಲಿರುವ ಜಿಲ್ಲೆಗಳು
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು, ಕರಾವಳಿ ಕರ್ನಾಟಕದ ಬಹುತೇಕ ಜಿಲ್ಲೆಗಳು ಇವೆಲ್ಲವೂ ಸೇರಿ 14 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
2.ಉತ್ತಮ ಮಳೆಯಾಗದ ಜಿಲ್ಲೆಗಳು
ದಕ್ಷಿಣ ಒಳನಾಡು ಬಾಗದಲ್ಲಿ : ಬೆಂಗಳೂರು, ಬೆಂಗಳೂರು ಸುತ್ತಮುತ್ತಲು ಇರುವಂತಹ ಜಿಲ್ಲೆಗಳು, ಮಧ್ಯ ಕರ್ನಾಟಕ, ಕೊಡಗು ಈ ಎಲ್ಲಾ ಜಿಲ್ಲೆಗಳಿಗೆ ಸಾಧಾರಣವಾದಂತ ಮಳೆ ಆಗುತ್ತೆ ಅಂತ ಹವಾಮಾನ ಇಲಾಖೆಯು ಮಾಹಿತಿ ಕೊಟ್ಟಿದೆ.
ಜುಲೈ 1 ರ ಹವಾಮಾನ ವರದಿ
-
ಆರೆಂಜ್ ಅಲರ್ಟ್ ಇರುವ ಜಿಲ್ಲೆಗಳು
ಕರಾವಳಿ ಕರ್ನಾಟಕ ಭಾಗದ ೩ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಜುಲೈ 1 ರಂದು ನೀಡಲಾಗಿದೆ. ನಮ್ಮ ರಾಜ್ಯದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆಯು ಸೂಚನೆಯನ್ನು ನೀಡಿದೆ.
-
ಯೆಲ್ಲೋ ಅಲರ್ಟ್ ಇರುವ ಜಿಲ್ಲೆಗಳು
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಈ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆಯು ಕೊಟ್ಟಿದೆ.
ಜುಲೈ 2 ರ ಹವಾಮಾನ ವರದಿ
- ಕರಾವಳಿ ಕರ್ನಾಟಕದ 3 ಜಿಲ್ಲೆಗಳು : ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇದೆ.
- ಬೀದರ್, ಕಲಬುರ್ಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಈ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ.
ಜುಲೈ 3 ರ ಹವಾಮಾನ ವರದಿ
- ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಈ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
- ಬೆಳಗಾವಿ, ಧಾರವಾಡ, ಗದಗ, ಹಾವೇರಿ ಈ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆಯು ಘೋಷಣೆ ಮಾಡಿದೆ.
ಮುಂಗಾರು ಮಳೆಯ ಬಗ್ಗೆ ಹವಾಮಾನ ಇಲಾಖೆಯ ವಿಜ್ಞಾನಿಗಳು ನೀಡಿದ ಹೇಳಿಕೆಗಳು
ಮುಂದಿನ 4, 5 ದಿನಗಳಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಿಗೆ ಮಾತ್ರ ಮಳೆ ಬರುತ್ತದೆ. ಜೂನ್ ತಿಂಗಳಲ್ಲಿ ಶೇಕಡಾ 43 ರಷ್ಟು ಮಾತ್ರ ಮಳೆ ಆದ ಕಾರಣ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತುಂಬಾನೆ ಕಡಿಮೆ ಆಗಿದೆ. ಶೇಕಡಾ 70 ರಷ್ಟು ಮಳೇನೆ ಬಂದಿಲ್ಲ, ಕೇವಲ ಶೇಕಡಾ 30 ರಷ್ಟು ಮಾತ್ರ ಮಳೆ ಆಗಿದೆ. ಹಾಗೇ ನೋಡಿದರೆ ಕೆಲವು ಜಿಲ್ಲೆಗಳಿಗೆ ಶೇಕಡಾ 20 ರಷ್ಟು ಇನ್ನೂ ಕೆಲವು ಜಿಲ್ಲೆಗಳಿಗೆ ಶೇಕಡಾ 15 ರಷ್ಟು ಮಾತ್ರ ಮಳೆ ಆಗೆದೆ. ಒಟ್ಟಾರೆ ಹೇಳುವುದಾದರೆ ಜೂನ್ ತಿಂಗಳಲ್ಲಿ ಕೇವಲ 43% ಮಳೆ ಆಗಿದೆ 57% ರಷ್ಟು ಮಳೆ ಇನ್ನೂ ಆಗಬೇಕಿದೆ ಆದರೆ ಆಗಿಲ್ಲ.
ಜುಲೈ, ಆಗಸ್ಟ್, ಸಪ್ಟೆಂಬರ್ ಈ 3 ತಿಂಗಳಲ್ಲಿ ಮಳೆಯು ಹೇಗಿರುತ್ತೆ ಅನ್ನುವುದರ ಕುರಿತು ಹವಾಮಾನ ಇಲಾಖೆಯ ವಿಜ್ಞಾನಿಗಳು ನೀಡಿದ ರಿಪೋರ್ಟ್ ನಿಜವಾಗಲು ತುಂಬಾ ಬೇಸರ ತರುತ್ತದೆ. ಅವರ ಹೇಳಿಕೆಯ ಪ್ರಕಾರ ಈ ತಿಂಗಳು ವಾಡಿಕೆಗಿಂತ ತುಂಬಾ ಕಡಿಮೆ ಮಳೆ ಬರುತ್ತದೆ. ಶೇಕಡಾ 30 ರಷ್ಟು ಮಳೆ ಆಗಬಹುದು, ಆದರೆ ಶೇಕಡಾ 70 ರಷ್ಟು ಮಳೆ ಆಗಲ್ಲ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಂದರೆ 2025 ರಲ್ಲಿ ಕೇವಲ 14% ಮಾತ್ರ ಮಳೆಯ ಕೊರತೆ ಇತ್ತು. ಆದರೆ ಈ ವರ್ಷದಲ್ಲಿ ಶೇಕಡಾ 70 ರಷ್ಟು ಮಳೆಯ ಕೊರತೆ ಇರಬಹುದು ಎಂದು ಹವಾಮಾನ ವರದಿ ಹೇಳುತ್ತದೆ. ಇದು ಖಂಡಿತವಾಗಿಯೂ ಬರಗಾಲದ ಲಕ್ಷಣವೇ ಅನ್ನೊ ಆತಂಕ ಎಲ್ಲರಲ್ಲೂ ಇದೆ.
ತುಂಗಭದ್ರಾ, ಕಾವೇರಿ ಎಲ್ಲಾ ಜಲಾಶಯಗಳ ಅಣೆಕಟ್ಟುಗಳ ಪರಿಸ್ಥಿತಿ ಹೇಗಿದೆ ಎಂದರೆ ಶೇಕಡಾ ೭೦ ರಷ್ಷು ನೀರು ಕಡಿಮೆ ಇದೆ. ಅಂದರೆ ನೀರು ತುಂಬದ ಪರಿಸ್ಥಿತಿ ಇದೆ. ಉದಾಹರಣೆಗೆ ತುಂಗಭದ್ರಾ ಜಲಾಶಯದಲ್ಲಿ 40TMC ನೀರು ತುಂಬಿತ್ತು. ಆದರೆ ಈಗೀನ situation ನೋಡಿದರೆ 9TMC, 8TMC ನೀರು ಇರುವುದನ್ನು ನೋಡಬಹುದು. ನೀರಿನ ಸಂಗ್ರಹ ಸಂಪೂರ್ಣ ಖಾಲಿಯಾಗುವ ಹಂತದ ಕಡೆಗೆ ಹೋಗುತ್ತಾ ಇದೆ. ಈ ರೀತಿಯಾದಂತಹ ಪರಿಸ್ಥಿತಿಯಲ್ಲಿ ಈಗ ನಾವಿದ್ದೇವೆ.
ಮಳೆಗಾಲದ ಸಮಯ ನಿಜವಾಗಿಯೂ ಈ ಸಂದರ್ಭದಲ್ಲಿ ಉತ್ತಮವಾದ ಮಳೆ ಆಗಬೇಕಿತ್ತು ಆದರೆ ಆಗಿಲ್ಲ. ಮುಂದಿನ ತಿಂಗಳು ಅಂದರೆ ಜುಲೈ, ಆಗಸ್ಟ್, ಸಪ್ಟೆಂಬರ್ ಅಲ್ಲಿ ಆದರೂ ಮಳೆ ಆಗುತ್ತೆ ಅಂತ ನೋಡಿದರೆ ಇಲ್ಲ ಹೇಳಿಕೋಳ್ಳುವಂತಹ ಮಳೆ ಏನೂ ಆಗೋದಿಲ್ಲ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಹೀಗೆ ಮುಂದುವರೆದರೆ ಈ ವರ್ಷ ಖಂಡಿತವಾಗಿಯೂ ಬರಗಾಲ ಕಂಡುಬರುವ ಎಲ್ಲಾ ಲಕ್ಷಣಗಳು ಇವೆ.
ಒಂದು ಸಣ್ಣ ಆಶಯದಿಂದ ಎಲ್ಲಾ ಜನರು ಅದರಲ್ಲೂ ರೈತರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಇದ್ದಾರೆ. ಮಳೆನಾಡಲ್ಲಿ ಮಳೆ ಆದರೆ ತುಂಗಭದ್ರಾ ತುಂಬುತ್ತೆ ಅದೇ ರೀತಿಯಾಗಿ ಎಲ್ಲಿ ಎಲ್ಲಾ ಅಣೆಕಟ್ಟು ಇದೆ ಅಲ್ಲಿ ಎಲ್ಲಾ ಮಳೆಯಾಗಿ ಅಣೆಕಟ್ಟು ತುಂಬಲಿ ಎನ್ನುವ ಆಶಾಭಾವನೆ ಇದೆ. ಇನ್ನು ಎಲ್ಲಾ ದೇವರ ಕೈಯಲ್ಲಿ ಇದೆ ದೇವರು ಕಣ್ಣು ತೆರೆದು ನೋಡಬೇಕು ಅಷ್ಟೆ. ಯಾಕೆಂದರೆ ಮನುಷ್ಯನ ಕೈಯಲ್ಲಿ ಇಲ್ಲ ಎಲ್ಲವೂ ಅವನಿಚ್ಛೆಯಂತೆ ನಡೆಯುತ್ತದೆ.
ಸರ್ಕಾರಕ್ಕೆ ಮೋಡ ಭಿತ್ತನೆ ಮಾಡುವ ಬಗ್ಗೆ ಕೇಳಿದರೆ ಅದರ ವಿಚಾರದಲ್ಲಿ ಯೋಚನೆ ಮಾಡ್ತಾ ಇದ್ದೇವೆ ಅಂತಾನು ಹೇಳ್ತಾರೆ. ಇದು ಈ ವಾರದ ಹವಾಮಾನ ವರದಿ ಹಾಗೆ ಮುಂದಿನ ತಿಂಗಳು ಯಾವ ರೀತಿ ಮಳೆಯಾಗಲಿದೆ ಅನ್ನುವುದರ ವರದಿಯಾಗಿದೆ.
ಜೂನ್ ತಿಂಗಳಲ್ಲಿ ಮಳೆ ಬರದೆ ಸಾಮಾನ್ಯ ಜನರು ಹಾಗೂ ರೈತರು ಪಟ್ಟ ಕಷ್ಟಗಳು
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿಯೆ ಮಳೆ ಬರಬೇಕಿತ್ತು. ಮಳೆ ಇಲ್ಲದೆ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದರು. ಒಂದು ಕಡೆಯಲ್ಲಿ ಬಿಸಿಲಿನ ತಾಪಮಾನ ಏರಿಕೆ, ಇನ್ನೊಂದು ಕಡೆಯಲ್ಲಿ ಮಳೆಯ ಸುಳಿವೇ ಇಲ್ಲ. ಅದರ ಜೊತೆಗೆ ನೀರಿನ ಕೊರತೆಯಿಂದ ಜನರು ಕಂಗಾಲಾಗಿದ್ದರು. ರೈತರ ಕಷ್ಟ ನೋಡಿದರೆ ಪಾಪ ,ಕಷ್ಟಪಟ್ಟು ಭಿತ್ತನೆ ಮಾಡಿದ ಬೆಳೆ ಚೆನ್ನಾಗಿ ಬೆಳೆಯಲು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಇದ್ದು ಮಳೆ ಬರದೆ ತುಂಬಾ ನಷ್ಟ ಅನುಭವಿಸಬೇಕಾಯಿತು. ಕೆಲವು ಕಡೆ ನೀರಿಲ್ಲದೆ ಗಿಡಗಳು ಒಣಗಿ ಹೋಗಿವೆ.
ಬೇರೆ ರಾಜ್ಯಗಳಲ್ಲೂ ಕೂಡ ನೀರಿಲ್ಲದೆ ಜನರು ತುಂಬಾ ಕಷ್ಟ ಅನುಭವಿಸಿದ್ದಾರೆ, ಮುಂಬೈನಲ್ಲಿ ಜನರಿಗೆ ದಿನನಿತ್ಯದ ಅಗತ್ಯಕ್ಕೆ ಉಪಯೋಗಿಸಲು ಕೂಡ ನೀರು ಇರಲಿಲ್ಲ. ಅವರಿಗೆ ಟ್ಯಾಕಂರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಡುಗೆ ಮಾಡಲು , ಸ್ನಾನ ಮಾಡಲು ನೀರು ಇಲ್ಲದೆ ಕಷ್ಟಪಟ್ಟಿದ್ದಾರೆ.
ಮಳೆಯ ಮುನ್ಸೂಚನೆಯಲ್ಲಿ ಹಳದಿ (Yellow) ಮತ್ತು ಕಿತ್ತಳೆ (Orange) ಅಲರ್ಟ್ ನೀಡಿದಾಗ ಸಾರ್ವಜನಿಕರು ತಕ್ಷಣವೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ.
1) ಹಳದಿ ಅಲರ್ಟ್ (Yellow Alert)
ಹಳದಿ ಅಲರ್ಟ್ ಎಂದರೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಜನರು ಪರಿಸ್ಥಿತಿಯ ಬಗ್ಗೆ ಗಮನವಹಿಸಬೇಕು ಎಂದು ಅರ್ಥ. ಈ ಸಮಯದಲ್ಲಿ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ.
- ಸ್ಥಳೀಯ ಹವಾಮಾನ ವರದಿಗಳು ಮತ್ತು ಸುದ್ದಿಗಳನ್ನು ಟಿವಿಗಳಲ್ಲಿ ನೋಡುತ್ತಾ ಗಮನಿಸುತ್ತಾ ಇರಿ ಹಾಗೂ ಮಾಹಿತಿಯನ್ನು ತಿಳಿದುಕೊಳ್ಳಿ.
- ಹೊರಗೆ ಹೋಗುವಾಗ ಕಡ್ಡಾಯವಾಗಿ ಛತ್ರಿ ಅಥವಾ ರೇನ್‌ಕೋಟ್ ಜೊತೆಯಲ್ಲಿ ಇಟ್ಟುಕೊಳ್ಳಿ. ವಾಹನ ಚಲಾಯಿಸುವಾಗ ವೇಗ ಮಿತಿಯಲ್ಲಿರಲಿ. ಯಾವುದೇ ಕಾರಣಕ್ಕೂ ಅತೀ ವೇಗವಾಗಿ ವಾಹನ ಚಲಾಯಿಸಬೇಡಿ.
- ಮನೆಯ ಸುತ್ತಮತ್ತಲಿನ ನೀರು ಹರಿದು ಹೋಗುವ ಚರಂಡಿ ಅಥವಾ ಪೈಪ್ ಗಳಲ್ಲಿ ಕಸಕಡ್ಡಿ ಇರದಂತೆ ಸ್ವಚ್ಛಗೊಳಿಸಿ, ನೀರು ನಿಲ್ಲದೆ ಹರಿದು ಹೋಗುವಂತೆ ದಾರಿ ಮಾಡಿ.
- ಸಿಡಿಲು, ಮಿಂಚು ಕಂಡುಬಂದಾಗ ಟಿವಿ, ಫ್ರಿಡ್ಜ್, ಕಂಪ್ಯೂಟರ್ ಪ್ಲಗ್ ಗಳನ್ನು ಸ್ವಿಚ್ ಬೋರ್ಡ್ ನಿಂದ ಹೊರತೆಗೆಯಿರಿ. ಈ ಸಮಯದಲ್ಲಿ ಮೊಬೈಲ್ ಯಿಂದ ಕೂಡ ದೂರ ಇರಿ.
2) ಕಿತ್ತಳೆ ಅಲರ್ಟ್ (Orange Alert)
ಕಿತ್ತಳೆ ಅಲರ್ಟ್ ಎಂದರೆ ಭಾರಿ ಮಳೆಯಾಗುವ ಮುನ್ಸೂಚನೆಯಾಗಿದ್ದು, ರಸ್ತೆಗಳು ಜಲಾವೃತಗೊಳ್ಳುವುದು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳ್ಳುವಂತಹ ಅಪಾಯದ ಸಾಧ್ಯತೆ ಹೆಚ್ಚು ಇರುತ್ತದೆ. ಈ ಸಂದರ್ಭದಲ್ಲಿ ತುಂಬಾ ಜಾಗರೂಕರಾಗಿರಬೇಕು.
- ಅನಗತ್ಯವಾಗಿ ನದಿಯ ತೀರಗಳಿಗೆ ಹೋಗುವುದು ಹಾಗೂ ಬೆಟ್ಟದ ತಳಭಾಗ, ಘಾಟ್ ಪ್ರದೇಶಗಳಿಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಯಾಕೆಂದರೆ ಹಠಾತ್ ಭೂಕುಸಿತ ಅಥವಾ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ.
- ವಿದ್ಯುತ್ ಕೈಕೊಡುವ ಸಾಧ್ಯತೆ ಇರುವುದರಿಂದ ಮೊಬೈಲ್ ಮತ್ತು ಪವರ್ ಬ್ಯಾಂಕ್ ನ್ನು ಪೂರ್ತಿಯಾಗಿ ಚಾರ್ಜ್ ಮಾಡಿ ಇಟ್ಟುಕೊಳ್ಳಿ. ಟಾರ್ಚ್, ದೀಪ ಮತ್ತು ಮೇಣದಬತ್ತಿಗಳನ್ನು ಸಿದ್ದವಾಗಿಡಿ.
- ನಿಮಗೆ ಈ ತುರ್ತು ಪರಿಸ್ಥಿತಿಯಲ್ಲಿ ಬೇಕಾಗುವ ಅಗತ್ಯ ಔಷಧಿಗಳು, ಕುಡಿಯುವ ನೀರು ಮತ್ತು ಕೆಲವು ದಿನಗಳಿಗೆ ಬೇಕಾಗುವಷ್ಟು ಆಹಾರವನ್ನು ಮೊದಲೆ ಸಂಗ್ರಹಿಸಿಟ್ಟುಕೊಳ್ಳಿ.
- ನೀರು ತುಂಬಿ ಹರಿಯುವ ನದಿ, ಹಳ್ಳ,ಕಿರಿದಾದ ಸೇತುವೆ ಅಥವಾ ಜಲಪಾತ ಇಂತಹ ಜಲಮೂಲಗಳಿಂದ ದೂರ ಇರಿ, ಇಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅಥವಾ ದಾಟಲು ಪ್ರಯತ್ನಿಸಬೇಡಿ.
- ಹಳೆಯ ಅಥವಾ ದುರ್ಬಲಗೊಂಡ ಗೋಡೆಗಳು ಮತ್ತು ಮರಗಳ ಕೆಳಗೆ ನಿಲ್ಲಬೇಡಿ.ರಸ್ತೆಯಲ್ಲಿ ಬಿದ್ದಿರುವ ವಿದ್ಯುತ್ ತಂತಿಗಳ ಬಗ್ಗೆ ಗಮನ ಇರಲಿ.
ಯಾವುದೇ ಅಲರ್ಟ್ ಇದ್ದಾಗಲೂ ಭಯಪಡದೆ, ಆಡಳಿತ ಮಂಡಳಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮ ಕುಟುಂಬವನ್ನು ಮತ್ತು ನಮ್ಮನ್ನು ತುಂಬಾ ಸುರಕ್ಷಿತವಾಗಿಡುತ್ತದೆ. ನಿಮ್ಮ ಭಾಗದಲ್ಲಿ ಸದ್ಯಕ್ಕೆ ಯಾವ ಅಲರ್ಟ್ ಇದೆ ಎಂಬುದನ್ನು ಗಮನಿಸಿಕೊಂಡು ಸುರಕ್ಷಿತವಾಗಿರಿ.
ಹಕ್ಕುತ್ಯಾಗ (Disclaimer)
ಮೇಲೆ ನೀಡಲಾಗಿರುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ. ಹವಾಮಾನದ ಪರಿಸ್ಥಿತಿಗಳು ಮತ್ತು ಅಲರ್ಟ್ ಗಳು ಸ್ಥಳದಿಂದ ಸ್ಥಳಕ್ಕೆ ತಕ್ಷಣವೇ ಬದಲಾಗಬಹುದು. ಮಳೆ ಮತ್ತು ಪ್ರಕೃತಿಯ ವಿಕೋಪದ ಸಂದರ್ಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಯಾವಾಗಲೂ ಹವಾಮಾನ ಇಲಾಖೆ ಮತ್ತು ಸ್ಥಳೀಯ ಆಡಳಿತ ಮಂಡಳಿ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಮತ್ತು ಎಚ್ಚರಿಕೆಗಳನ್ನು ಕಡ್ದಾಯವಾಗಿ ಅನುಸರಿಸಬೇಕು.