Telegram Join My Telegram

ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PMVBRY) – 2026

ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PMVBRY) ಕೇಂದ್ರ ಸರ್ಕಾರದ ಹೊಸ ಉದ್ಯೋಗ ಪ್ರೋತ್ಸಾಹ ಯೋಜನೆಯಾಗಿದೆ. ಈ ಯೋಜನೆ EPFO (Employees Provident Fund Organization ) ಗೆ ಲಿಂಕ್ ಆಗಿರುತ್ತದೆ. ಅಂದರೆ, ನಿಮ್ಮ PF Account ಅಥವಾ UAN Account ಮೂಲಕ ಈ ಯೋಜನೆಯ ಲಾಭ ಪಡೆಯಬಹುದು.

ಈ ಯೋಜನೆಯ ಮುಖ್ಯ ಉದ್ದೇಶ ಹೊಸ ಉದ್ಯೋಗಿಗಳಿಗೆ ಆರ್ಥಿಕ ಸಹಾಯ ನೀಡುವುದು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು.

ಈ ಲೇಖನದಲ್ಲಿ PMVBRY ಯೋಜನೆ ಏನು? ಯಾರಿಗೆ ಸಿಗುತ್ತದೆ? ಅರ್ಹತೆ ಏನು? ಎಷ್ಟು ಹಣ ಸಿಗುತ್ತದೆ?ಕಂತು (Installment) ಹೇಗೆ ಬರುತ್ತದೆ? ಎಲ್ಲವನ್ನೂ ಕನ್ನಡದಲ್ಲಿ ತಿಳಿಯೋಣ.

ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PMVBRY) – 2026

PMVBRY ಯೋಜನೆ ಎಂದರೇನು?

PMVBRY ಅಂದರೆ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ. ಇದು ಹೊಸದಾಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಸರ್ಕಾರದಿಂದ ನೀಡುವ ಆರ್ಥಿಕ ಪ್ರೋತ್ಸಾಹ ಯೋಜನೆ.

ಈ ಯೋಜನೆ EPFO ಸದಸ್ಯರಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ನಿಮ್ಮ ಕಂಪನಿ PF ಕಡಿತ ಮಾಡುತ್ತಿದ್ದರೆ ಮಾತ್ರ ನೀವು ಈ ಯೋಜನೆಗೆ ಅರ್ಹರಾಗಬಹುದು.

UAN Account ಎಂದರೇನು?

UAN (Universal Account Number) ಎಂಬುದು 12 ಅಂಕಿಗಳ EPFO ಸಂಖ್ಯೆ. ನೀವು ಮೊದಲ ಬಾರಿಗೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ ಕಂಪನಿ ನಿಮ್ಮ PF Account ತೆರೆದು UAN ನೀಡುತ್ತದೆ.

ಈ UAN ಮೂಲಕವೇ PMVBRY ಯೋಜನೆಯ ಅರ್ಹತೆಯ ಪರಿಶೀಲನೆ (Scheme eligibility check) ಮಾಡಬಹುದು.

PMVBRY ಯೋಜನೆಯ ಅರ್ಹತೆಯ ಮಾನದಂಡ (Scheme Eligibility Criteria)

ಈ ಯೋಜನೆಗೆ ಅರ್ಹರಾಗಲು 6 ಮುಖ್ಯ ಷರತ್ತುಗಳಿವೆ.

1. ಸೇರುವ ದಿನಾಂಕ (Joining Date)

  • ನೀವು ಕಂಪನಿಗೆ ಮೊದಲ ಬಾರಿಗೆ ಸೇರಿರುವ ದಿನಾಂಕ:1 August 2025 ರಿಂದ 31 July 2027 ಒಳಗೆ ಇರಬೇಕು.
  • ಈ ಅವಧಿಯಲ್ಲಿ ಹೊಸ ಉದ್ಯೋಗಿಯಾಗಿ ಸೇರಿದ್ದರೆ ಮಾತ್ರ ಅರ್ಹತೆ.

2. ಯುಎಎನ್ ಬಯೋಮೆಟ್ರಿಕ್ ಪರಿಶೀಲನೆ (UAN Biometric Verification)

  • ನಿಮ್ಮ UAN Account biometric verification ಆಗಿರಬೇಕು.
  • ಮುಖದ ದೃಢೀಕರಣ ತಂತ್ರಜ್ಞಾನ (Face Authentication Technology) (FAT) ಮೂಲಕ ಪರಿಶೀಲನೆ ಕಂಪ್ಲೀಟ್ ಆಗಿರಬೇಕು.

3.ಮೊದಲ ತಿಂಗಳ ಪಿಎಫ್ ಕೊಡುಗೆ

  • ಕಂಪನಿ ನಿಮ್ಮ ಮೊದಲ ತಿಂಗಳಪಿಎಫ್ ಕೊಡುಗೆ ಠೇವಣಿ (deposit) ಮಾಡಿರಬೇಕು.
  • EPFO passbook ನಲ್ಲಿ ಅದು ಕಾಣಬೇಕು.

4. ABPS ನಲ್ಲಿ ಆಧಾರ್ ಸೀಡ್ ಮಾಡಬೇಕು

  • ನಿಮ್ಮ ಆಧಾರ್‌ ಕಾರ್ಡ್‌ ಬ್ಯಾಂಕ್‌ ಖಾತೆಗೆ ಲಿಂಕ್ ಆಗಿರಬೇಕು.
  • ABPS (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ಮೂಲಕ DBT ಹಣ ಜಮಾ ಆಗುತ್ತದೆ.

5. ಸಂಬಳ ಮಿತಿ

  • ಕಂಪನಿಗೆ ಸೇರುವಾಗ ನಿಮ್ಮ ಒಟ್ಟು ಸಂಬಳ:₹1,00,000 ಕ್ಕಿಂತ ಕಡಿಮೆ ಇರಬೇಕು.
  • ಇದಕ್ಕಿಂತ ಹೆಚ್ಚು ಸಂಬಳ ಇದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ.

6. ಸಕ್ರಿಯ ಉದ್ಯೋಗ (Active employment)

  • ನೀವು ಕೆಲಸ ಬಿಟ್ಟಿರಬಾರದು.
  • ಕಂಪನಿಯಲ್ಲಿ ಕೆಲಸ ಮುಂದುವರಿಸುತ್ತಿರಬೇಕು.

PMVBRY ಡ್ಯಾಶ್‌ಬೋರ್ಡ್ ನಲ್ಲಿ ಸ್ಟೇಟಸ್ ಹೇಗೆ ನೋಡಬೇಕು?

ಗೂಗಲ್ ನಲ್ಲಿ:

‌ಮೆಂಬರ್‌ ಹೋಮ್‌ (Member Home) EPFO ಎಂದು search ಮಾಡಿ login ಆಗಿ.

UAN number ಮತ್ತು password ಹಾಕಿ login ಮಾಡಿ.

ಡ್ಯಾಶ್‌ಬೋರ್ಡ್ ನಲ್ಲಿ PMVBRY option ಕಾಣುತ್ತದೆ.

ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ eligibility status ಕಾಣುತ್ತದೆ.

ಉದಾಹರಣೆ:

Eligible

Not Eligible

Verification Pending

Contribution Pending

PMVBRY ಯೋಜನೆಯ ಪ್ರಯೋಜನ ಎಷ್ಟು ಸಿಗುತ್ತದೆ?

ಈ ಯೋಜನೆಯಲ್ಲಿ ಗರಿಷ್ಠ ₹15,000 ವರೆಗೆ ಸಿಗಬಹುದು.

ಉದಾಹರಣೆ:

  • ಸಂಬಳ ₹10,000 ಇದ್ದರೆ → ₹10,000 ಪ್ರಯೋಜನ
  • ಸಂಬಳ ₹12,000 ಇದ್ದರೆ → ₹12,000 ಪ್ರಯೋಜನ
  • ಸಂಬಳ ₹15,000 ಇದ್ದರೆ → ₹15,000 ಪ್ರಯೋಜನ
  • ಸಂಬಳ ₹20,000 ಇದ್ದರೂ → ₹15,000 ಮಾತ್ರ

ಗರಿಷ್ಠ ಮಿತಿ ₹15,000.

ಹಣ ಹೇಗೆ ಸಿಗುತ್ತದೆ?

ಈ ಯೋಜನೆಯ ಹಣ 2 ಕಂತುಗಳಲ್ಲಿ ಬರುತ್ತದೆ.

  1. ಮೊದಲ ಕಂತು (First Installment)

ಮೊದಲ ಕಂತು ಪಡೆಯಲು : ಒಂದೇ ಕಂಪನಿಯಲ್ಲಿ 6 ತಿಂಗಳು ಕೆಲಸ ಮಾಡಿರಬೇಕು.

6 ತಿಂಗಳ PF ಕೊಡುಗೆ ಕಂಪ್ಲೀಟ್ ಆಗಿರಬೇಕು

ಆಮೇಲೆ ಸಿಸ್ಟಮ್ ಸ್ವಯಂ ಲೆಕ್ಕಾಚಾರ ಮಾಡಿ ಮೊದಲ ಕಂತು ಬಿಡುಗಡೆ‌ ಮಾಡುತ್ತದೆ.

2. ಎರಡನೇ ಕಂತು

ಎರಡನೇ ಕಂತು ಪಡೆಯಲು :12 ತಿಂಗಳು PF ಕೊಡುಗೆ ಆಗಿರಬೇಕು

ಆರ್ಥಿಕ ಸಾಕ್ಷರತಾ ಕೋರ್ಸ್ ಪೂರ್ಣಗೊಂಡಿರಬೇಕು.

ಅದಾದ ನಂತರ ಎರಡನೇ ಕಂತು ಬಿಡುಗಡೆ‌ ಆಗುತ್ತದೆ.

ಹಣ ಯಾವ ಬ್ಯಾಂಕ್ ಖಾತೆಗೆ ಬರುತ್ತದೆ?

ಆಧಾರ್ ಲಿಂಕ್ ಆಗಿರುವ NPCI ಬ್ಯಾಂಕ್ ಖಾತೆಗೆ ಬರುತ್ತದೆ.

ಅಂದರೆ, ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ DBT enabled ಇದೆಯೋ ಅದಕ್ಕೆ ಹಣ ಬರುತ್ತದೆ.

NPCI ಲಿಂಕ್ ಇಲ್ಲದಿದ್ದರೆ ಏನು ಮಾಡಬೇಕು?

ಆಯ್ಕೆ 1 : ಬ್ಯಾಂಕ್‌ಗೆ ಹೋಗಿ NPCI ಮ್ಯಾಪಿಂಗ್ ಫಾರ್ಮ್ ಭರ್ತಿ ಮಾಡಿ.

ಆಯ್ಕೆ 2 : ಆನ್ಲೈನ್ ಮೂಲಕ ಆಧಾರ್ ಸೀಡಿಂಗ್ ಮಾಡಬಹುದು.

Not Eligible ಎಂದು ಬಂದರೆ ಏನು ಮಾಡಬೇಕು?

  • ಡ್ಯಾಶ್‌ಬೋರ್ಡ್ ನಲ್ಲಿ Not Eligible ಬಂದರೆ:
  • ಸೇರಿದ ದಿನಾಂಕ ಸರಿಯಿದೆಯೇ ನೋಡಿ
  • PF ಕೊಡುಗೆ ನವೀಕರಣ (update) ಆಗಿದೆಯೇ ನೋಡಿ
  • ಆಧಾರ್ ಲಿಂಕ್ ಮಾಡಲಾಗಿದೆಯೇ ನೋಡಿ
  • ಮುಖದ ದೃಢೀಕರಣ ಪೂರ್ಣಗೊಂಡಿದೆಯೇ ನೋಡಿ

ಪ್ರಮುಖ ಅಂಶಗಳು

  • ಈ ಯೋಜನೆ EPFO ಸದಸ್ಯರಿಗೆ ಮಾತ್ರ
  • ಹೊಸದಾಗಿ ಕೆಲಸ ಸೇರಿದವರಿಗೆ ಹೆಚ್ಚು ಲಾಭ
  • PF ಕಡ್ಡಾಯ ಆಗಿರಬೇಕು
  • ಸಂಬಳ ₹1 ಲಕ್ಷದ ಒಳಗೆ ಇರಬೇಕು
  • ಗರಿಷ್ಠ ₹15,000 ಪ್ರಯೋಜನ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. PMVBRY ಯೋಜನೆ ಎಲ್ಲರಿಗೂ ಸಿಗುತ್ತದೆಯಾ?

ಇಲ್ಲ. ಅರ್ಹತಾ ಮಾನದಂಡಗಳನ್ನು ಪೂರೈಸಿ (Eligibility criteria fulfill) ದವರಿಗೆ ಮಾತ್ರ.

2.ಅಸ್ತಿತ್ವದಲ್ಲಿರುವ ಉದ್ಯೋಗಿಗಳಿಗೆ ಸಿಗುತ್ತದೆಯಾ?

ಹೊಸ ಸೇರುವ ದಿನಾಂಕದ ಮಾನದಂಡ ಇದ್ದರೆ ಮಾತ್ರ.

3. PF ಇಲ್ಲದವರಿಗೆ ಸಿಗುತ್ತದೆಯಾ?

ಇಲ್ಲ.

4. ಎಷ್ಟು ಹಣ ಸಿಗುತ್ತದೆ?

ಗರಿಷ್ಠ ₹15,000.

ತೀರ್ಮಾನ

PMVBRY ಯೋಜನೆ ಉದ್ಯೋಗಿಗಳಿಗೆ ಉತ್ತಮ ಯೋಜನೆ. ಹೊಸದಾಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದವರು PF account ಹೊಂದಿದ್ದರೆ ಈ ಯೋಜನೆ ಮೂಲಕ ₹15,000 ವರೆಗೆ ಪಡೆಯಬಹುದು.

EPFO ಡ್ಯಾಶ್ ಬೋರ್ಡ್ ನಲ್ಲಿ ಸ್ಟೆಟಸ್ ಚೆಕ್ ಮಾಡಿ ಎಲ್ಲಾ ಮಾನದಂಡಗಳನ್ನು ಪೂರ್ತಿ ಮಾಡಿ.

ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಒತ್ತಿರಿ

ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ (PMVBRY) – 2026

ಇದನ್ನೂ ಓದಿ

ಪ್ರಧಾನ್ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)-2026

Leave a Comment